RSS

Category Archives: ವಿ[ಚಿತ್ರ]ಶಿಷ್ಟ ಕ್ರಿಯಾಶೀಲತೆ!?

ನಿಮ್ಮ ಕಣ್ಣಿಗು ಇಂತಹ ವೈಚಿತ್ರ್ಯಗಳು ಗೋಚರಿಸಿರಬಹುದು. ಆದರೆ ಅದನ್ನು ನೋಡುವ ದೃಷ್ಟಿಕೋನದ ಮೇಲೆ ಅದು ನೀಡುವ ಅನುಭವ ಅವಲಂಭಿಸಿರುತ್ತದೆ. ಇವುಗಳು ಕೆಲವೊಮ್ಮೆ ಕ್ರಿಯಾಶೀಲ ಮನಸ್ಸಿನ ಪ್ರತಿಬಿಂಬ ಎಂದೆನಿಸಿದರು, ಎಷ್ಟೋ ಸಾರಿ ಇಂತಹ ಅತೀ ಬುದ್ಧಿವಂತಿಕೆಯ ಪ್ರದರ್ಶನಗಳೆ ಅಸ್ವಸ್ಥ ಮನಸ್ಸಿನ ವಿಕೃತಿಯನ್ನು ಹೊರ ಹಾಕಿರುತ್ತವೆ. ಇಂತಹ ವಿ[ಚಿತ್ರ]ಕೃತಿಗಳನ್ನ ಇಲ್ಲಿ ಪ್ರಕಟಿಸುವ ಒಂದು ಪ್ರಯತ್ನ ಆಗಾಗ ಜಾರಿಯಿರುತ್ತದೆ.
ಸ್ಪಷ್ಟನೆ : ಇಲ್ಲಿ ಕೇವಲ ಕೊಂಕು ಪ್ರತಿಭಾ ಪ್ರದರ್ಶನವಲ್ಲದೆ, ಅತ್ಯುತ್ತಮ ಕ್ರಿಯಾಶೀಲ ಪ್ರಯತ್ನಗಳನ್ನು ಪ್ರಕಟಿಸಲಾಗುತ್ತದೆ. ಇದು ಒಂದು ತರಹ ಕ್ರಿಯಾಶೀಲತೆಯ ಧನಾತ್ಮಕ ಮತ್ತು ನಕಾರಾತ್ಮಕ ಮನಸ್ಸುಗಳ ಅನಾವರಣ ಎಂದು ಹೇಳಬಹುದು.

ರೂಪಾಯಿ ರಾಜ…!!!!!!

ಈ ನೋಟಿನ ಮೇಲೆ ಬರೆದಿರುವ ಅಕ್ಷರಗಳ ಮೇಲೆ ಕೊಂಚ ಕಣ್ಣಾಡಿಸಿ. ಹಣ ಕಂಡರೆ ಹೆಣವು ಬಾಯಿಬಿಡುತ್ತದೆ ಎಂದು ಹೇಳುವಾಗ ‘ಈ ಹಣ ಪಡೆದವರು ಹೆಣವಾಗುತ್ತಾರೆ’, ಎಂಬ ಹೇಳಿಕೆ ನೋಡಿದರೆ ನಗಬೇಕೋ, ಅಳಬೇಕೋ ನೀವೆ ಹೇಳಿ. ದಾಸರೆ ಹೇಳಿದ್ದಾರೆ, ‘ಹಣವೇ ನಿನ್ನ ಗುಣವೇನು ಬಣ್ಣಿಸಲಿ, ಹಣವಿಲ್ಲದವ ಹೆಣಕು ಕಡೇ ಕಂಡೆ’, ಎಂದಿರುವಾಗ ಸಿಕ್ಕ ದುಡ್ಡನ್ನ ಎಸೆಯೋದಿಕ್ಕಾಗುತ್ತಾ! ಕೊಂಚ ನಗೆ ಉಕ್ಕಿಸಿದರು, ನೋಟಿನ ಮೇಲೆ ಇಂತಹ ವಿಕಾರಗಳನ್ನು ಸೃಷ್ಟಿಸುವುದು ಎಂತಹ ಹೇಯ ಮನಸ್ಥಿತಿ ಎಂದೆನಿಸುತ್ತದಲ್ಲವೆ! ಏಕೆಂದರೆ ನನಗನ್ನಿಸಿದಂತೆ It Happens Only In India!?

ಹಣವೇ ನಿನ್ನ (ಅವ)ಗುಣವೇನು ಬಣ್ಣಿಸಲಿ...

ಹಣವೇ ನಿನ್ನ (ಅವ)ಗುಣವೇನು ಬಣ್ಣಿಸಲಿ...

 

ಟ್ಯಾಗ್ ಗಳು:

ಶೀಘ್ರವೇ ನಿಮ್ಮ ಮುಂದೆ….

ಪ್ರಿಯ ಸ್ನೇಹಿತರೆ,ನಾನು ಈ ಬ್ಲಾಗಿಗೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ನಿಮಗೆಲ್ಲಾ ಹೇಳಿದ್ದೆ, ಆದಷ್ಟು ಬೇಗ ಬ್ಲಾಗಿಗೆ ಹೊಸ ರೂಪ,  ವಿಶಿಷ್ಟ ರೀತಿಯ ಬರವಣಿಗೆ ನೀಡುತ್ತೇನೆ ಎಂದು. ಅಂದರ ಒಂದು ಪ್ರಯತ್ನವಾಗಿ ಈ ಹೊಸ ವಿಭಾಗ ಜೀವ ತಳೆಯಲಿದೆ. ಇದು ನನ್ನ ಹಳೆಯ ಯೋಚನೆಗೆ ಒಂದಿಷ್ಟು ಹೊಸ ರೂಪ ತುಂಬುವ ಕೆಲಸ. ಹೆಸೆರೇನು ಎಂದು ಕೇಳಬೇಡಿ. ಅದು ಅಂದೇ ಕಾಣಿಸಿಕೊಳ್ಳುತ್ತದೆ. ಇದು ಅತ್ಯದ್ಭುತ ಆಲೋಚನೆ  ಎಂದು ಹೇಳುತ್ತಿಲ್ಲ. ಆದರೆ ವಿಶಿಷ್ಟ ಬರವಣಿಗೆಯ ಮೂಲಕ ನಿಮ್ಮಲ್ಲೊಂದು ನಗೆ ಬುಗ್ಗೆ ಹುಟ್ಟಿಸುವ ಪ್ರಯತ್ನ. ನೀವು ಈ ಅನುಭವಕ್ಕೆ ಒಳಗಾಗಿರುತ್ತೀರಿ ಅದನ್ನು ಮರಳಿ ನೆನಪಿಸುವ ಮತ್ತು ಆ ಅನುಭವಕ್ಕೆ ಮತ್ತೆ ಯತ್ನಿಸುವಂತೆ ಮಾಡುವ ಸಾಹಸ ಅಷ್ಟೇ!

ಗೆಳೆಯರೇ, ಶೀಘ್ರದಲ್ಲೆ ಆ ಯೋಚನೆಯನ್ನು ಕಾರ್ಯರೂಪಕ್ಕೆ ಇಳಿಸುತ್ತೇನೆ. ನಿಮ್ಮ ಹಾರೈಕೆ ಮತ್ತು ಬೆಂಬಲ ಎಂದಿನಂತಿರಲಿ……..

 

ಟ್ಯಾಗ್ ಗಳು:

 
%d bloggers like this: