RSS

Category Archives: ಜೀವ ಚುರ್ರ ಎಂದಾಗ

ಇದ್ದು ಇಲ್ಲದ ಸಂಬಂಧಗಳು..ಯಾರಿಗೆ ಯಾರೋ ಪುರಂದರ ವಿಠಲ…

“ವಯಸ್ಸಿನಲ್ಲಿ ಕನಸುಗಳು ಬೆನ್ನು ಹತ್ತುತ್ತವೆ, ಆದರೆ ವಯಸ್ಸಾದ ಮೇಲೆ ಆಸೆಗಳು ಬೆನ್ನು ಹತ್ತುತ್ತವೆ. ನಿಮಗೆ ಸಾಕೆನಿಸಿರಬಹುದು, ಆದರೆ ನಮ್ಮದಿನ್ನು ಮುಗಿದಿಲ್ಲವಲ್ಲ. ದಿನ ರಾತ್ರಿ  ಸಾಕಿನ್ನು ಅಂತ ಮಲಗ್ತೀವಿ, ಆದರೆ ಏನು ಮಾಡ್ತೀಯಾ, ಬೆಳಕಾಗುತ್ತೆ, ಎಚ್ಚರವಾಗುತ್ತೆ, ಹಸಿವು, ನೀರಡಿಕೆ ಆಗುತ್ತೆ. ಅವಶ್ಯಕತೆ ಮೀರಿ ಉಳಿದುಕೊಂಡೆವೇನೋ….” ಇದು ಸೇತುರಾಂ ಅವರ (ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕೆ ಅವರ ಕ್ಷಮೆ ಕೇಳುತ್ತಾ) ನಿರ್ದೇಶನದಲ್ಲಿ ಮೂಡಿಬರಲು ಸಿದ್ಧವಾಗಿರುವ ಹೊಸ ಧಾರಾವಾಹಿಯ ಸಾಲುಗಳು. ಹಳ್ಳಿಯಲ್ಲಿ ಗಂಡನೊಂದಿಗೆ ದಿನ ದೂಡುತ್ತಿರುವ ಆತನ ಹೆಂಡತಿ ಹತಾಶಳಾಗಿ ಪಟ್ಟಣದಲ್ಲಿರುವ ಮಗನಿಗೆ ಫೋನ್ ಮಾಡಿ ಬಂದು ಮುಖ ತೋರಿಸಿ ಹೋಗು ಎಂದು ಕೇಳಿಕೊಳ್ಳುವ ಪರಿ.

ಇದು ಭಾರತ. ಇಲ್ಲಿ ಕೌಟುಂಬಿಕ ಮೌಲ್ಯಗಳಿವೆ.ಪ್ರತಿ ಬಾಂಧವ್ಯಕ್ಕು ಗಟ್ಟಿ ನೆಲಗಟ್ಟು ಹಾಕಲಾಗುತ್ತದೆ. ತಂದೆ ತಾಯಿಗಳಲ್ಲಿ ಸಾಕ್ಷಾತ್ ದೇವರನ್ನೆ ಕಾಣಲಾಗುತ್ತದೆ. ಅದಕ್ಕೆ ಮಾತೃ ದೇವೋ ಭವ..ಪಿತೃ ದೇವೋ ಭವ…ಎಂಬುದು ನಮ್ಮ ಪುರಾತನ ಗ್ರಂಥಗಳಲ್ಲಿಯೆ ರಚಿತವಾಗಿದೆ. ನಮ್ಮದು ಮಹಾನ್ ಸುಸಂಸ್ಕೃತ ರಾಷ್ಟ್ರ. ಏನೇ ಹೇಳಿ ಮೇರಾ ಭಾರತ್ ಮಹಾನ್…

ಈ ಪದಗಳನ್ನು ಕೇಳಿ..ಕೇಳಿ…ಸವೆದು ಹೋಗಿದ್ದಷ್ಟೇ ಅಲ್ಲ, ರೇಸಿಗೆ ಬಂದು ಹೋಗಿದೆ. ಆದರೆ ಇದನ್ನು ಬೇಸರದಿಂದ ಹೇಳುತ್ತಿಲ್ಲ. ತುಂಬಾ ದುಃಖ ಮತ್ತು ಹತಾಶೆಯೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಅತಿಶಯೋಕ್ತಿ ಎಂಬುದು ಏನು ಇಲ್ಲ. ಇಡೀ ಸಮಾಜವೇ ಬೆತ್ತಲೆಯಾಗಿ ನಿಂತಿರುವಾಗ ಮಾನ ಮುಚ್ಚುವ ಪ್ರಯತ್ನವಾದರು ಯಾಕೆ…!!!

ಮಕ್ಕಳೆ, ನೀವೆ ನಮ್ಮ ಬಾಳಿನ ಊರುಗೋಲು!

ಮಕ್ಕಳೆ, ನೀವೆ ನಮ್ಮ ಬಾಳಿನ ಊರುಗೋಲು!

ಲೀಲಕ್ಕ ಹೇಳುತ್ತಿದ್ದಳು ನಮಗೆ ಪರಿಚಿತರೊಬ್ಬರ ಮನೆಯಲ್ಲಿ ಹೆಂಡತಿಯನ್ನು ಕಳೆದುಕೊಂಡ ವಯಸ್ಸಾದ ವ್ಯಕ್ತಿಯೊಬ್ಬರು ಒಂಟಿಯಾಗಿ ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾ ಕೆಳ ಮನೆಯಲ್ಲಿ ವಾಸವಾಗಿದ್ದರೆ, ಅದೇ ಮನೆಯ ಮೇಲಿನ ಮಹಡಿಯಲ್ಲಿ ಅವರ ರಕ್ತವನ್ನು ಹಂಚಿಕೊಂಡು ಹುಟ್ಟಿದ ಸುಪುತ್ರ ತನ್ನ ಪತ್ನಿಯೊಂದಿಗೆ ತನಗು ಅವರಿಗು ಸಂಬಂಧವೇ ಇಲ್ಲ ಎಂಬಂತೆ ಬದುಕುತ್ತಿದ್ದಾನಂತೆ. ಇದು ಆಧುನಿಕ ಸಮಾಜದ ಪ್ರತಿಬಿಂಬ. ನಮ್ಮ ಮೌಲ್ಯಗಳು ಅದೆಷ್ಟು ಅಧಃಪತನಕ್ಕೆ ಇಳಿದಿದ್ದಾವೆ ಎಂಬುದಕ್ಕೆ ಸರಳ ಉದಾಹರಣೆ. ಇದಕ್ಕು ಹೇಯವಾದ ಪ್ರಕರಣಗಳಿವೆ. ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವ, ನಿಟ್ಟುಸಿರು ಬಿಡುವ ಯಾವ ದುರ್ದು ಇಲ್ಲ.ನಾನಿಲ್ಲಿ ಹಂಚಿಕೊಳ್ಳ ಹೊರಟಿರುವುದು ಮೌಲ್ಯಗಳ ಕುರಿತಾದದ್ದಲ್ಲ. ಸವೆದು ಹೋಗುತ್ತಿರುವ ರಕ್ತ ಸಂಬಂಧಗಳ ಬಗ್ಗೆ. ಇದಕ್ಕಿಂತ ದುರಂತ ಮತ್ತೊಂದಿರಲಾರದು ಅಲ್ಲವೇ.

ನಿಮಗೆಲ್ಲ ಖಂಡಿತಾ ನೆನಪಿದೆ ಅಂದುಕೊಳ್ಳುತ್ತೇನೆ. ಹೇಗೆ ನಮ್ಮ ಕುಟುಂಬ ವ್ಯವಸ್ಥೆ ಗಟ್ಟಿಯಾಗಿ ಬೇರು ಬಿಟ್ಟಿತ್ತು. ಮೊದ ಮೊದಲು ಊರಿಗೆ ಊರೇ ಕುಟುಂಬದಂತೆ ಬದುಕುತ್ತಿದ್ದವು. ನಂತರ ಅದು ಒಂದು ಮನೆತನದ ಮಟ್ಟಿಗೆ ಇಳಿಯಿತು. ಅಣ್ಣ, ತಮ್ಮಂದಿರು ಒಟ್ಟಿಗೆ ಬಾಳಲಾರಂಭಿಸಿದರು. ನಮ್ಮ ಸಮಾಜ ಶಾಸ್ತ್ರಜ್ಞರು ಅದನ್ನು ಅವಿಭಕ್ತ ಕುಟುಂಬ ಎಂದು ಕರೆದರು. ಬೆಳದಿರದ ಪ್ರಪಂಚ, ಚೆನ್ನಾಗಿ ಬೆಳೆಯುತ್ತಿದ್ದ ಹೊಲ, ತೋಟ ಮನೆಯಲ್ಲಿ ಕೆಲವರನ್ನು ಸೋಮಾರಿಗಳಾಗಿ ಪರಿವರ್ತಿಸಿದರು, “ಕುಲಗೌರವ” ಅದನ್ನೆಲ್ಲಾ ಹೊಟ್ಟೆಯೊಳಗೆ ಮುಚ್ಚಿಟ್ಟು ಕೊಳ್ಳುತ್ತಿತ್ತು. ಯಾವುದೇ ಕಾರಣಕ್ಕು “ಮನೆಯೊಂದು ಮೂರು ಬಾಗಿಲು” ಆಗಲು ಬಿಡುತ್ತಿರಲಿಲ್ಲ. ಕುಟುಂಬದ ಹಿರಿಯರು ಯಾರ “ಬದುಕು” ಎಂದಿಗೂ “ಗಾಳಿಪಟ”ವಾಗದಂತೆ ನೋಡಿಕೊಳ್ಳುವರು. ಅದರೆ ಬೇರುಗಳಾದರು ಎಷ್ಟು ದಿನ ಅಂತ ಮರವನ್ನ ಗಟ್ಟಿಯಾಗಿ ಹಿಡಿದಾವು. ಅವು ಮುಕ್ಕಾದ ಮೇಲೆ ಬುಡ ಸಮೇತ ಗಿಡ ನೆಲಕ್ಕುರುಳಲೆ ಬೇಕು ಅಲ್ಲವೆ! ಅದೇ ಆಗಿದ್ದು. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದವು. ಎಲ್ಲ ಮಕ್ಕಳು ಬೇರೆ, ಬೇರೆ ಮನೆಗಳಲ್ಲಿ ವಾಸಿಸಲಾರಂಬಿಸಿದರು. ಅದು ಆಧುನೀಕರಣಕ್ಕೆ ನಾಂದಿ, ಜಾಗತೀಕರಣ ಹಾಕಿದ ಕುಣಿಕೆ ಎಂದು ಆಗ ತಿಳಿದಿರಲಿಲ್ಲ. ಅಪ್ಪ-ಅಮ್ಮ ಸರದಿಯಂತೆ ಒಬ್ಬೊಬ್ಬರ ಮನೆಯಲ್ಲಿರಲಾರಂಭಿಸಿದರು. ಆದರೆ ಇಂದಿನ ಕುಟುಂಬ ವ್ಯವಸ್ಥೆಗೆ ಅದ್ಯಾವ ನಾಮಕರಣ ಮಾಡಬೇಕೋ ಭಗವಂತನೇ ಹೇಳಬೇಕು. ಮಕ್ಕಳು ಸ್ವತಂತ್ರರಾದರು, ವಯಸ್ಸಾದ ತಂದೆ,ತಾಯಿ ಅತಂತ್ರರಾದರು.

ಯಾಕೆ ಬದುಕು ಯಾಂತ್ರಿಕೃತವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ದೊರಕಲಾರದು.ಏನೇ ಹೇಳಿದರು ಕೂಡಾ ಅದು ಕೇವಲ ಸಮರ್ಥನೆಯ ಪ್ರತಿರೂಪದಂತಿರುತ್ತದೆ ಅಷ್ಟೇ. ಯಾಕೆ ವಯಸ್ಸಾದ ತಂದೆ ತಾಯಿಗಳು ನಮ್ಮ ಜನಾಂಗಕ್ಕೆ Extra burden ಎಂದೆನಿಸುತ್ತಿದ್ದಾರೆ ಅರ್ಥವಾಗದು. ಬದುಕಿನುದ್ದಕ್ಕು ಮಕ್ಕಳ ಹಿತಕ್ಕಾಗಿಯೆ ಪರಿತಪಿಸುವ ಅಪ್ಪ, ಅಮ್ಮಂದಿರು ಒಂದು ಹಂತದಲ್ಲಿ ಅವರ ಆಸರೆಗೆ ಹಪಹಪಿಸಬೇಕಾಗಿ ಬರುವುದು ಹೃದಯ ಹಿಂಡಿದ ಅನುಭವವಲ್ಲವೆ. ಎಲ್ಲರಿಗೂ ತಮ್ಮ, ತಮ್ಮ ಬದುಕೆ ಪ್ರಾಮುಖ್ಯ ಎಂಬುದಾದರೆ ಇಡೀ ಬದುಕನ್ನೆ ನಮಗಾಗಿ ತೇಯ್ದ ಅಪ್ಪ, ಅಮ್ಮಂದಿರು ಅನಾದರಕ್ಕೆ ಇಡಾಗಬೇಕೆ? ಬದುಕಿನ ದುರಂತವೇ ಇದಲ್ಲವೆ! ಇನ್ನೂ ಅಚ್ಚರಿಯ ವಿಷಯವೆಂದರೆ ಇಂದು ಎಷ್ಟೋ ಮಕ್ಕಳು ಹೆತ್ತವರನ್ನು ತಾವೇ ಕೈಹಿಡಿದು ವೃದ್ಧಾಶ್ರಮದವರೆಗು ಬಿಟ್ಟು ಬರುವ ಔದಾರ್ಯ ತೋರಿಸುತ್ತಾರೆ. ಇದು ಹೃದಯ ಹೀನತೆ, ನೈತಿಕ ದಾರಿದ್ರ್ಯ ಎಂದಷ್ಟೆ ಹೇಳಿ ಕೈ ತೊಳೆದುಕೊಳ್ಳುಲು ಸಾಧ್ಯವೇ!

ಜೊತೆಯಲ್ಲಿದ್ದರು ಕಣ್ಣಿತ್ತಿ ನೋಡದ ಮಕ್ಕಳು ಒಂದು ರೀತಿಯಾದರೆ, ತಂದೆ ತಾಯಿಯನ್ನು ಒಂಟಿಯಾಗಿ ಬಿಟ್ಟು ತಮ್ಮ ಭವಿಷ್ಯ ಅರಿಸಿ ಪಟ್ಟಣಕ್ಕೊ, ವಿದೇಶಕ್ಕೊ ಹಾರಿ ಹೋಗುವ ವರ್ಗ ಇನ್ನೊಂದು ಕಡೆ. ಕೊನೆಯುಸಿರಿರುವವರೆಗು ದಕ್ಕದ ಮಕ್ಕಳಿಗಾಗಿ ಬಿಕ್ಕಳಿಸುತ್ತಾ ಕಾಲ ಕಳೆಯುವುದೊಂದೆ ಆ ಮುದಿ ಜೀವಗಳಿಗೆ ಒದಗಿ ಬರುವ ದೌರ್ಭಾಗ್ಯ. ಜೀವನ ರೂಪಿಸಿಕೊಳ್ಳುವ ಭರದಲ್ಲಿ, ಜೀವ ಕೊಟ್ಟವರನ್ನೆ ಮರೆತು ಮುಂದೆನಡೆಯುವುದು ತೀರಾ ಸರ್ವೇ ಸಾಮಾನ್ಯ ವಿಷಯವಾಗಿದೆ. ಕಳೆದು ಹೊದ ಬದುಕು ಮತ್ತೆ ಮರಳಿ ಪಡೆಯುವದು ಹೇಗೆ ಅಸಾಧ್ಯವೋ, ಹಾಗೇ ಕಾಲ ಗರ್ಭದಲಿ ಮಿಂಚಿ ಮರೆಯಾಗಿ ಹೋಗುವ ಅಪ್ಪ ಅಮ್ಮ ಕೂಡಾ. ಪುಟ್ಟ ಬೆರಳು ಹಿಡಿದು ನಡೆಯಲು ಕಲಿಸಿದ ಅವರ ಮಾಗಿದ ಕೈ ಹಿಡಿದು ಕಾಳಜಿಯಿಂದ ಕಾಣುವುದು ನಮ್ಮ ಬದುಕಿನ ಒಂದು ಭಾಗವಾಗಬೇಕಲ್ಲವೆ….

Advertisements
 

ಟ್ಯಾಗ್ ಗಳು:

ಸಿದ್ದು! ಈ ಸಾವು… ಆಘಾತಕಾರಿ!!!

ಅಗಲಿದ ಗೆಳೆಯನಿಗೊಂದು ಶ್ರದ್ಧಾಂಜಲಿ.

ಮಿತ್ರ ಸಿದ್ದು ಅಗಲಿ ತಿಂಗಳುಗಳೆ ಕಳೆದವು. ಬದುಕಿನುದ್ದಕ್ಕು ಸದಾ ಹಸನ್ಮುಖಿಯಾಗಿ, ಗೆಳೆಯರ ಒಡನಾಟದಲ್ಲಿ ಒಂದು ಮಿಂಚಿನ ಸಂಚಾರವಾಗಿದ್ದ ಸಿದ್ದು ಬಾರದ ಲೋಕಕ್ಕೆ ತಿರುಗಿ ಹೊಗಿದ್ದು ನಿಜಕ್ಕು ಭರಿಸಲಾಗದ ದುಃಖ ನಿಡಿದೆ. ನಮ್ಮನ್ನೆಲ್ಲಾ ಅಗಲಿ ಹೋದೆಯಾ ಗೆಳೆಯಾ....ನನ್ನ ಮತ್ತು ಸಿದ್ದು ಪರಿಚಯ ಭಾಗ್ಯನಗರದ ಹೈಸ್ಕೂಲ್ ನಿಂದ ಪ್ರಾರಂಭವಾಗಿದ್ದು. ನಿತ್ಯ ಅವನ ಸೈಕಲ್ ನಲ್ಲಿ ನಾನು ಸ್ಕೂಲ್ ಗೆ ಹೋಗುತ್ತಿದ್ದೆ. ತುಂಬಾ ಆತ್ಮೀಯತೆಯಿಂದ ನನ್ನನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಸಿದ್ದು. ತುಂಬಾ ಬೇಗನೆ ಇಬ್ಬರ ಮಧ್ಯ ಸಲುಗೆ ಬೆಲೆದು ಹೋಗಿತ್ತು. ಅವನು ಅದೆಷ್ಟು ಬೇಗ ಜಗಳಕ್ಕೆ ಮೈ ಮೇಲೆ ಏರಿ ಹೋಗುತ್ತಿದ್ದನೋ, ಅಷ್ಟೇ ಬೇಗ ಗೆಳೆತನದ ತೆಕ್ಕೆಗೆ ಸೆಳೆದುಕೊಳ್ಳುವ ಮಾಂತ್ರಿಕತೆ ಅವನಲ್ಲಿತ್ತು. ಸಿದ್ದು ನನಗೆ ತೀರಾ ಆಪ್ತ ಎಂದೇನು ಅಲ್ಲ. ಆದರೆ ಖಂಡಿತ ನನಗೆ ಪ್ರೀತಿಯ ಗೆಳೆಯನಾಗಿದ್ದಾ. ಅವನ ಸಾವಿನ ಖಾಲಿತನ ನಿರಂತರ…”ಸಿದ್ದಾ ಇಲ್ಲೆ ಹ್ಯಾಂಗ ಬಿಂದಾಸ್ ಆಗಿದ್ದಿ, ಅಲ್ಲಿಯು ನಿನ್ನ ಆತ್ಮ ಫುಲ್ ಖುಷ್ ಆಗಿರಲಿ. ನಿನ್ನ ಜಾತ್ರೆ ಮುಗಿತಲೆ ಮಗನ….”

 

ಟ್ಯಾಗ್ ಗಳು:

 
%d bloggers like this: