RSS

Category Archives: ಗುಸುಗುಸು ಪಿಸುಪಿಸು

ಹುಡುಗಿಯರೆ, ‘ಎದೆ’ಗಾರಿಕೆ ತೋರಿಸಿದರೆ ಅಪಾಯ ತಪ್ಪಿದ್ದಲ್ಲ!

ಅದ್ಯಾವ ಸಮೀಕ್ಷೆಯಿಂದ  ಆಂಧ್ರದ ಡಿಜಿಪಿ ಅವರಿಗೆ ಈ ವಿಷಯ ಗೊತ್ತಾಯಿತೋ ತಿಳಿಯದು. ಅಂತು ತಮ್ಮ ಇಷ್ಟು ವರ್ಷಗಳ ಅನುಭವವನ್ನು ಬಳಸಿ ಒಂದು ಫರ್ಮಾನು ಹೊರಡಿಸಿಯೇ ಬಿಟ್ಟರು. ಪಾಪ! ಅವರಿಗೆ ಅದರ ಸಾಧಕ, ಬಾಧಕಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲಕ್ಕೆ ಹೀಗೆ ಹೇಳಿರಬಹುದು. ಆದರೆ ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಇಲಾಖೆಯ ಮಂತ್ರಿಗಳಾದ ಸಿ.ಸಿ.ಪಾಟೀಲ್ ಅವರು ಇದು ತಮ್ಮ ಖಾತೆಗೆ ಸಂಬಂಧಿಸಿದ ವಿಚಾರವೆಂದೋ ಏನೋ ಡಿಜಿಪಿ ಅವರು ಹೇಳಿದ್ದು ದೇವರಾಣೆಗು ಸತ್ಯ ಎಂದು ಸಮಸ್ತ ನಾಡಿನ ಮಹಿಳಾ ಮಣಿಗಳ ಘನತೆ ಕಾಪಾಡುವ ಹೊಣೆ ಹೊತ್ತರು. ಅಲ್ಲಿಗೆ ಶುರುವಾಯಿತು ಎಲ್ಲಮ್ಮಾ ನಿನ್ನಾಲ್ಕು ಉಧೋ… ಉಧೋ… ಉಧೋ…….

ಇಷ್ಟಕ್ಕು ನಡೆದೆದ್ದೆನೆಂದರೆ ಆಂಧ್ರದ ಡಿಜಿಪಿಯವರು ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಪ್ರೇರಣೆ ಅವರು ತೋಡುವ  ಉಡುಪುಗಳೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದರ್ಥ ಮಹಿಳೆಯರು ಮಾದಕವಾಗಿ ಕಾಣುವಂತೆ ಬಟ್ಟೆ ತೋಡುವುದು ಗಂಡಿಸಿಗೆ ಕಾಮ ಪ್ರಚೋದನೆ ನೀಡುತ್ತದೆ ಎಂಬುದನ್ನು ಸೂಚ್ಯವಾಗಿ ಧ್ವನಿಸುತ್ತದೆ. ಇದು ಅವರ ತನಿಖೆಯಿಂದ ಬಯಲಾದ ಸತ್ಯವೋ ಅಥವಾ ಗುಪ್ತಚರ ಮಾಹಿತಿಯೋ ಅಂತು ಅತ್ಯಾಚಾರದ ಹಿಂದಿನ ರಹಸ್ಯವನ್ನು ಭೇಧಿಸಿದರು. ಇದಕ್ಕೆ ನಮ್ಮ ರಾಜ್ಯದ ಮಂತ್ರಿಗಳಾದ ಸಿ.ಸಿ.ಪಾಟೀಲ್ ಅವರು ಕೂಡಾ ಧ್ವನಿಗೂಡಿಸಿದರು. ಅಲ್ಲಿಗೆ ಹೊತ್ತಿಕೊಂಡಿತು “ವಸ್ತ್ರ ಜ್ವಾಲೆ”.

ಇಂತಹದ್ದೊಂದು ಹೇಳಿಕೆ ತೀರಾ ಬಾಲಿಶ ಅಂದೆನಿಸದಿದ್ದರು, ಅತ್ಯಾಚಾರ ಹೆಚ್ಚುತ್ತಿರುವದಕ್ಕೆ ಈ ಕಾರಣ ಕೇವಲ ಶೇ.2ರಷ್ಟು(ಒಂದು ಊಹೆ ಮಾತ್ರ) ಕಾಣಿಕೆ ಸಂದಾಯ ಮಾಡಿರಬಹುದೆನೋ. ಆದರೆ ಈ ಹೇಳಿಕೆಯನ್ನು ಮಹಿಳಾ ಹೋರಾಟಗಾರರು ಖಡಾಖಂಡಿತವಾಗಿ ಏಡಗೈಯಲ್ಲಿ ನೀವಾಳಿಸಿ ಎಸೆದಿದ್ದಾರೆ. ಅವುಗಳು ಅರ್ಥಪೂರ್ಣವಾಗಿವೆ ಮತ್ತು ಸಮಂಜಸ  ಎಂದೆನಿಸುತ್ತವೆ. ಕಾರಣ ಅತ್ಯಚಾರಕ್ಕೆ ಪ್ರೇರಣೆ ಕೇವಲ ತೊಡುವ ಉಡುಪುಗಳೆ ಆಗಿದ್ದರೆ ಅಪ್ರಾಪ್ತ ಬಾಲಕಿಯರ ಮೇಲೆ, ಹಸುಳೆಗಳ ಮೇಲಿನ ಕಾಮುಕರ ನಿರ್ಲಜ್ಜ ತನಕ್ಕೆ ಯಾವ ಪ್ರೇರಣೆ ಎಂಬುದು ಅವರ ಒಕ್ಕೂರಲಿನ ಪ್ರಶ್ನೆ. ಹಾಗೆಯೇ ಕೆಲವೊಂದು ಮುಸ್ಲಿಂ ರಾಷ್ಟ್ರಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದ್ದರೂ, ಅತ್ಯಾಚಾರಿಗಳಿಗೆ ಕಠಿಣಾತಿ, ಕಠಿಣ ಶಿಕ್ಷೆ ವಿಧಿಸಿದರು ಅಲ್ಲಿ ಇಂದಿಗೂ ಅತ್ಯಾಚಾರವನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿಲ್ಲ. ಇದಕ್ಕೇನು ಪ್ರೇರಣೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅತ್ಯಾಚಾರಕ್ಕೆ ಕಾರಣ ಒಂದು ಹೀನ ಮನಸ್ಥಿತಿ. ಅಲ್ಲಿ ವ್ಯಕ್ತಿಗೆ ಕಾಮ ತೃಷೆ ಮಾತ್ರ ಮುಖ್ಯ. ಅದನ್ನು ತೀರಿಸಿ ಕೊಳ್ಳಲು ಅವನಿಗೆ ಹೆಣ್ಣು ಬೇಕು. ಅದಕ್ಕೆ ಎಷ್ಟೋ ಸಾರಿ ವಯಸ್ಸು, ಸಂಬಂಧ ಮತ್ತು ಸಂದರ್ಭಗಳ ಪರಿವೇ ಇರುವುದಿಲ್ಲ. ಸಂಸ್ಕೃತದ “ಕಾಮಾತುರಾಣಾಂ ನ ಭಯಂ, ನ ಲಜ್ಜಾ” ಎಂಬ ಘೋಷವಾಕ್ಯವನ್ನು ಉದಾಹರಿಸುವುದಾದರೆ ಈ ಪ್ರಕ್ರಿಯೆ ಶತ, ಶತಮಾನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದು ಎಂಬುದು ವೇದ್ಯವಾಗುತ್ತದೆ. ಹೀಗಿರುವಾಗ ತೀರಾ ಮಡಿವಂತಿಕೆ ಯ ಸಮಾಜ ಅಸ್ತಿತ್ವದಲ್ಲಿದ್ದಾಗಲು ಅತ್ಯಾಚಾರವಿರಲಿಲ್ಲ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವೇ!?

ಇನ್ನೂ ಉಡುಪು ಕೇವಲ ಮಾನ ಮುಚ್ಚುವ ವಸ್ತ್ರವಷ್ಟೇ ಆಗಿ ಉಳಿದಿಲ್ಲ ಎಂಬುದನ್ನು ಮನಗಾಣಬೇಕು. ಇಲ್ಲಿ ಹಲವು ಸಂಪ್ರದಾಯಗಳವರು ತೋಡುವ ಉಡುಪಿನಲ್ಲಿ ಅನೇಕ ವೈರುಧ್ಯತೆಯನ್ನು ಗಮನಿಸಬಹುದು. ಅವು ರೂಢಿಸಿಕೊಂಡು ಬಂದಂತಹವು. ಅದರಲ್ಲಿ ಪ್ರಚೋದನೆಯ ಅಂಶವನ್ನು ಹುಡುಕಲಾದೀತೆ. ಜನಾಂಗದಿಂದ ಜನಾಂಗಕ್ಕೆ, ಧರ್ಮಗಳಿಂದ, ಧರ್ಮಕ್ಕೆ, ದೇಶಗಳಿಂದ, ದೇಶಕ್ಕೆ ಉಡುಪುಗಳಲ್ಲಿ ಭಿನ್ನತೆ ಸಾಮಾನ್ಯವಾದದ್ದು. ಅದು ಅಲ್ಲಿನ ಸಂಸ್ಕೃತಿಯ ಭಾಗವೇ ಆಗಿ ಹೋಗಿದೆ. ಹೀಗಿರುವಾಗ  ಅತ್ಯಚಾರಕ್ಕು ಉಡುಪಿಗು ಸಂಬಂಧ ಹೆಣೆಯುವದು ಪಲಾಯನಾವಾದ ಎನಿಸಿಕೊಳ್ಳುತ್ತದೆ. ಎಲ್ಲೋ ಗಂಡಿನ ಹೀನ ಮನಸ್ಥಿತಿಯ ಸಮರ್ಥನೆಯಾಗಿ ಗೋಚರಿಸುತ್ತದೆ. ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ, ಶೈಕ್ಷಣಿಕವಾಗಿ ಸಾಕಷ್ಟು ಯಶಸ್ಸುಗಳಿಸಿರುವಲ್ಲಿಯು ಅತ್ಯಾಚಾರವೆಂಬ ಪಿಡುಗು ಶಮನವಾಗಿಲ್ಲ. ಅಷ್ಟೇ ಏಕೆ ನಮ್ಮಲ್ಲಿಯೆ ಪ್ರತಿ ವರ್ಷ ಕೇಳಿ ಬರುವ ಲೈಂಗಿಕ ಶೋಷಣೆಯ ಕೂಗುಗಳೂ ಏಳುವುದು ಕಾಲೇಜು, ವಿಶ್ವವಿದ್ಯಾಲಯಗಳಿಂದಲೇ. ಇದಕ್ಕೇನು ಹೇಳಲು ಸಾಧ್ಯ. ಹೆಣ್ಣನ್ನು ಭೋಗದ ವಸ್ತು ಎಂದು ರಾಮಾಯಣ, ಮಹಾಭಾರತ ಕಾಲದಿಂದಲೂ ಚಿತ್ರಿಸುತ್ತಲೆ ಬಂದಿರುವಾಗ ಇಂದು ಆ ಮನಸ್ಥಿತಿಯನ್ನೆ ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಹಾಕಲು ಸಾಧ್ಯವೇ?

ಮನುಷ್ಯ ಎಷ್ಟೇ ಆಧುನಿಕತೆಯನ್ನು ಒಪ್ಪಿಕೊಂಡರು ಕೆಲವು ಬದಲಾವಣೆಗಳು ಅಸಾಧ್ಯ. ಅದರಲ್ಲಿ ಈ ಅತ್ಯಾಚಾರವು ಒಂದು. ಮತ್ತೊಂದು ವಿಷಯವೆಂದರೆ ಸದಾ ಮುಚ್ಚಿಟ್ಟಿದ್ದರ ಬಗ್ಗೆಯೆ ಮನುಷ್ಯನಿಗೆ ಕುತೂಹಲ ಹೆಚ್ಚು. ಚಿಕ್ಕ ಮಕ್ಕಳನ್ನು ಕೇಳಿದರೆ ಹೇಳುತ್ತಾರೆ. ಆದರು ನಮ್ಮಲ್ಲಿ ಇನ್ನು “ಚೋಲಿ ಕೆ ಫೀಛೆ ಕ್ಯಾ ಹೈ” ಎಂಬ ತುಂಟ ಪ್ರಶ್ನೆ ಕೇಳುವದನ್ನು ಬಿಟ್ಟಿಲ್ಲ. ಕಾಲಾಂತರದಿಂದ ಗಮನಿಸುತ್ತಾ ಬನ್ನಿ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಹೆಕ್ಕಿ ತೆಗೆದು ನೋಡಿದರು ಅಲ್ಲಿ ಅತ್ಯಾಚಾರದ ದೃಶ್ಯ ಕಾಣುವುದು ಗೌರಮ್ಮನಂತೆ ಸೀರೆ ಹುಟ್ಟ ಹೆಂಗಸಿನ ಮೇಲೆಯೇ, ಇದಕ್ಕೇನು ಹೇಳೋಣ. ಅದಕ್ಕೆ ನೀವು ಮಡಿವಂತಿಕೆಯಿಂದ ಬಟ್ಟೆ ತೊಟ್ಟ ತಕ್ಷಣ ಕಾಮಣ್ಣರು, ಸಜ್ಜನರಾಗುವುದಿಲ್ಲ.

ಹಾಗೆಂದ ಮಾತ್ರಕ್ಕೆ ಹೇಗೆ ಬಟ್ಟೆ ತೊಟ್ಟರು ನಡೆಯುತ್ತೆ ಎಂಬ ಅಸಡ್ಡೆಯು ಸಲ್ಲದು. ನಮ್ಮದು ಸುಸಂಸ್ಕತ ರಾಷ್ಟ್ರ. ಇದು ತೀರಾ ಮನುವಾದವಲ್ಲ. ಆದರೆ ತೊಡುವ ಬಟ್ಟೆ ಮಾನ ಮುಚ್ಚುವ ಜೊತೆಗೆ ಆಕರ್ಷಕವಾಗಿರಬೇಕು.ಹಾಗೆಂದು ಸಭ್ಯತೆ ಎಲ್ಲೆಯನ್ನು ಮೀರಬಾರದು. ಎದೆ ಕಾಣುವಂತೆ, ತೊಡೆ ಕಾಣುವಂತೆ ಬಟ್ಟೆ ತೊಡುವುದು ಫ್ಯಾಷನ್ ಏನಿಸುವದಿಲ್ಲ. ಪ್ರಾಪರ್ಟಿ ಪ್ರದರ್ಶನ ಏನಿಸುತ್ತೆ. ಅದಕ್ಕೆ ಎಲ್ಲೆ ಮೀರದ ಉಡುಪು ತೋಡುವುದು ಕೇವಲ ಸಂಸ್ಕೃತಿಯ  ಪಾಲನೆ ಅಷ್ಟೇ ಅಲ್ಲ, ಸಂಸ್ಕಾರದ ಪ್ರತಿಬಿಂಬವು ಎಂಬುದನ್ನು ಮರೆಯಬಾರದು.

Advertisements
 

ಟ್ಯಾಗ್ ಗಳು:

ಎಂಜ್ಲಿನಾ ಜೂಲಿ ಆಗ್ತಾಳಂತ ಆಧುನಿಕ ದ್ರೊಪದಿ

ತಕ್ಕೋಳ್ರಪ್ಪ ಸುದ್ದೀನ. ನಮ್ಮ ಪ್ರಕಾಶ ಝಾ ಅದನ್ಲಾ, ಅದೇ ರಾಜನೀತಿ ಅಂತ ಹೊಸ ಮಹಾಭಾರತ ಮಾಡ್ಯಾನ್ಲ ಅಂವನ ಈಗ ದ್ರೌಪದಿ ಮ್ಯಾಗ ಒಂದು ಸಿನಿಮಾ ಮಾಡಕ ಹೊಂಟಾನಂತ. ಇದು ಏನಪ್ಪಾ ಅಂದ್ರ ಅಲ್ಲಿ ಹೆಂಗ ದ್ರೋಪದಿ ಮೆರೆದಿದ್ಲು ಅದನ್ನ ಈಗ ಸಿನಿಮಾ ಮಾಡಕ ಪಿಲಾನ ಮಾಡ್ಯಾನಂತ. ಆದ್ರ ಇದನ್ನ ಕೇಳ್ರಿ ನಮ್ಮ ದ್ರೌಪದಿ ಪಾರ್ಟ ಮಾಡಾಕ ಇಲ್ಲಿ ಯಾವ ಹೆಂಗಸ್ರು ಸಿಕ್ಕಿಲ್ಲಂತ. ಅದ್ಕ ದೂರದ್ದ ಅಮೆರಿಕಾದಾಗಿಂದ ಅದೇನೋ ಎಂಜಲ ಎಲಿ ಅಲ್ಲಲ್ಲಾ ಎಂಜಲಿನಾ ಜೂಲಿ ಅನ್ನಾಕಿನ ಹಿಡ್ಕೋಂಬರಬೇಕು ಅಂತ ಸ್ಕೆಚ್ ಹಾಕ್ಯಾನಂತ. ಹೆಂಗೈತಿ ಸುದ್ದಿ. ಆ ರಾಕೇಶ ರೋಸನ್ ಅದ್ಯಾವುದೋ ಬರಬ್ಬರಿ ಮೋರಿ ಅಂತಾನೋ, ಬಾರ್ಬರಾ ಮುರಿ ಅಂತಾನು ಒಂದು ಕೆಂಪು ಮುಖ ಹಿಡ್ಕೊಂಡು ಬಂದಿದ್ದಾ ಈಗ ನಮ್ಮ ಪರಕಾಶಣ್ಣ ನಾನೇನ ಕಡಿಮೆ ಅಂತ ಇನ್ನೊಂದು ಮಖ ಕರ್ಕಂಬರಾಕ ರೆಡಿ ಆಗ್ಯಾನ. ಹೆಂಗೈತಿ ನಮ್ಮ ಸಿನಿಮಾದವ್ರ ಶೋಕಿ

 

ಟ್ಯಾಗ್ ಗಳು:

 
%d bloggers like this: