RSS

ನನ್ನ ಪುರಾಣ

ನೋಡ್ರಿ ನಾನು ಉತ್ತರ ಕರ್ನಾಟಕದ ಕೊಪ್ಪಳದಂವ. ವಿಜಯಕುಮಾರ ನರಗುಂದ ನಾಮಾಂಕಿತ. ಏನೋ ಆಗಕ ಹೋಗಿ ಈಗ ಇನ್ನೇನೋ ಆಗಿನಿ. ಪತ್ರಿಕೋದ್ಯಮ ನನಗ ಭಾಳ ಹಿಡಿಸೈತಿ. ಆಗಾಗ ಪತ್ರಿಕೋದ್ಯಮದ ಹತ್ತಿರ ಸುಳಿದು ಬರ್ತಾ ಇರ್ತೀನಿ. ಮಾಧ್ಯಮ ಜಗತ್ತೇ ನನ್ನ ವೃತ್ತಿ ಮತ್ತು ಪ್ರವೃತ್ತಿ ಎರಡು. ಇದನ್ನೆ ಬಿಟ್ಟರೆ ಪೋಟೋ ತೆಗೆಯೊದು, ಚೋಲೋ ಸಿನಿಮಾ ನೋಡೊದು, ಆಗಾಗ ಏನಾದ್ರು ಗಿಚೋದು ಅಂದ್ರ ಶಾನೆ ಇಷ್ಟ… ಇಷ್ಟು ಸಾಕು ಅನಿಸುತ್ತೆ…
 

 

Advertisements
 

9 responses to “ನನ್ನ ಪುರಾಣ

 1. ಶೆಟ್ಟರು (Shettaru)

  ಜುಲೈ 2, 2010 at 10:50 ಫೂರ್ವಾಹ್ನ

  ಛಲೋ ಆತು ತೋಗೊರಿ, ಕಟಾಗ ರೊಟ್ಟಿ ಇನ್ನ್ ಮ್ಯಾಲೆ ಆನ್ ಲೈನ ಸಿಗತೈತಿ, ಕಾರಬ್ಯಾಳಿ ವ್ಯವಸ್ಥಾ ನೀವ ಮಾಡ್ತಿರೋ? ಇಲ್ಲಾ ನಾವ ಮಾಡ್ಕೊಬೇಕೋ?

  ಹೊಳ್ಳೇಮುಳ್ಳೆ ಬರ್ತಿರ್ತಿನ್ರಿ ಕಟಗ್ ರೊಟ್ಟಿ ತಿನ್ನಾಕ. 🙂

  -ಶೆಟ್ಟರು

   
  • vijaykumarnargund

   ಜುಲೈ 2, 2010 at 11:02 ಫೂರ್ವಾಹ್ನ

   ಶೆಟ್ರ ಬ್ಯಾಳಿ ಏನ ಸಿಗ್ತದ ಖಾರ, ಏಣ್ಣಿ ಗುರಳ್ ಪುಡಿ ಅಂತೆಲ್ಲಾ ಕೇಳಬ್ಯಾಡ್ರಿ. ನಮ್ಮದೇನಿದ್ರು ಬರಡು ನಾಡಿನ ಊಟ. ಮಸಾಲಿ ಕಡಿಮೆ. ಓದಿದ್ರ ಖಾರಾ ತಿದಾಗ ಆಗ್ತದ. ನೀವು ಆಗಾಗ ಹಿಂಗ ಬಂದು ಹೋಳ್ಗಿ ಅಂತ ಮಾತಾಡಿ ಹೋದ್ರ, ನಾವು ಖಾರಬ್ಯಾಳಿ ಬಗ್ಗೆ ಯೋಚ್ನಿ ಮಾಡ್ತೀವಿ. ನಿಮ್ಮ ರೆಸ್ಪಾನ್ಸು ನಮಗ ರಗಡ ಬಲ ಕೊಟೈತ್ರಿ ಶೆಟ್ರ. ನಾವು ನಿಮಗ ಭಾಳ ಅಭಾರಿ ಆಗಿವಿ 🙂
   – ವಿಜಯ್. ನರಗುಂದ. ಕೊಪ್ಪಳ

    
 2. aksharavihaara

  ಫೆಬ್ರವರಿ 7, 2011 at 9:01 ಫೂರ್ವಾಹ್ನ

  ಸರ್ರು,
  ಬ್ಲಾಗ್‌‍ಲೋಕದಲ್ಲಿ ನಿಮ್ಮನ್ನು ನೋಡಿ ಖುಷಿ ಆಯ್ತು. ಹಿಂಗೆ ಬರಿತ ಇರಿ..
  -ವಿನಾಯಕ ಕೋಡ್ಸರ

   
  • vijaykumarnargund

   ಫೆಬ್ರವರಿ 9, 2011 at 9:36 ಅಪರಾಹ್ನ

   ವಿನಾಯಕ್ ನಿಮ್ಮ ಅಭಿಮಾನದ ಪದಗಳಿಗೆ ನಾನು ಋಣಿ.ಪ್ರಾರಂಭದಲ್ಲಿ ನನಗೆ ಬ್ಲಾಗ್ ಬರೆಯುವ ಸಾಹಸಕ್ಕೆ ಕೈ ಹಾಕುವಲ್ಲಿ ಆತಂಕ ಇತ್ತು. ಆದರೆ ನಿಮ್ಮಂತಹವರ ಪ್ರೀತಿ ಈಗ ನನ್ನನ್ನು ಈ ಲೇಖನಗಳು ಮೂಡಿ ಬರಲು ಪ್ರೇರೇಪಿಸಿವೆ ಎಂದು ಹೇಳಬಹುದು. ಮತ್ತೊಮ್ಮೆ ಧನ್ಯವಾದಗಳು ವಿನಾಯಕ್

   ನಿಮ್ಮಡೆಗೆ ಸ್ನೇಹ ಹಸ್ತ ಚಾಚುವ
   ವಿಜಯ್. ನರಗುಂದ

    
 3. M. S. Patil

  ಅಕ್ಟೋಬರ್ 18, 2011 at 12:09 ಅಪರಾಹ್ನ

  Pritiya Vijayravare,

  Bhala kusi atha nodri nimma blog noadi matta jolad rotti background image nodi urkade nenapu atri sir. Content is also good sirji .Keep update and I always love to read your blog.

  Danyvadagalondighe…

  mspatil (Dharwad)

  mumbai

   
  • vijaykumarnargund

   ಅಕ್ಟೋಬರ್ 24, 2011 at 12:57 ಅಪರಾಹ್ನ

   ಆತ್ಮೀಯ ಪಾಟೀಲ್ ರೇ, ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬರೆಯಲು ನೂರೆಂಟು ವಿಷಯಗಳಿದ್ದರು ಸಮಯದ ಅಭಾವದಿಂದ ಕಾಲ,ಕಾಲಕ್ಕೆ ಲೇಖನಗಳನ್ನು ಹಾಕಲು ಆಗುತ್ತಿಲ್ಲ. ಅದಕ್ಕೆ ಬೇಸರ ಮತ್ತು ಜಿಗುಪ್ಸೆ ಎರಡು ಇವೆ. ಆದರೆ ಖಂಡಿತಾ ಮತ್ತೆ ಲೇಖನಗಳನ್ನು ಬ್ಲಾಗ್ ಗೆ ನಾಳೆಯಿಂದಲೇ ಸೇರಿಸುತ್ತೇನೆ. ಈ ಮೆಚ್ಚುಗೆಗೆ ನಾನು ಋಣಿ…

   ವಿಜಯಕುಮಾರ ನರಗುಂದ

    
 4. sitaram

  ಡಿಸೆಂಬರ್ 27, 2011 at 4:20 ಅಪರಾಹ್ನ

  ಭಾಳ ಭೇಶ ಬರೀತಿಯೋ ತಮ್ಮಾ …ಹಿಂಗ ಬರಕೊಂತ ಇರು… ನಾವು ಬರ್ತಿವಿ ಓದಾಕಾ …

   
 5. hampanna. b. kolakar

  ನವೆಂಬರ್ 11, 2015 at 12:08 ಅಪರಾಹ್ನ

  ಬಾಳಂದ್ರ ಭಾಳ ಚಂದ ಐತ್ರಿ ನಿಮ್ಮ ಬರವಣಿಗೆ ಧಾಟಿ. ನಿಮ್ಮ ಪದ್ಗಳ ಜೋಡನೆ, ನೀವ್ ವಿಷಯ ಹೇಳೋ ಶೈಲಿ ಎಲ್ಲ ಪಸಂದ ಅದ್ರಿ. ಖೂಷಿ ಆಯ್ತು. ಹೀಗೆ ಬರಿತಾ ಇರಿ.

   
  • vijaykumarnargund

   ನವೆಂಬರ್ 11, 2015 at 4:16 ಅಪರಾಹ್ನ

   ಧನ್ಯವಾದಗಳು ಹಂಪಣ್ಣ. ನಿಮ್ಮ ಪ್ರತಿಕ್ರಿಯೆ ಮತ್ತಷ್ಟು ಬರಹಗಳಿಗೆ ಸ್ಫೂರ್ತಿ. ಒಂದೇ ಸಾಲಿನಲ್ಲಿಯೇ ಬೆಟ್ಟದಷ್ಟು ಪ್ರೋತ್ಸಾಹದ ಮಾತುಗಳನ್ನ ಆಡಿದ್ದೀರಿ. ನಿಮ್ಮ ಪ್ರೀತಿಗೆ ಋಣಿ

    

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: