RSS

Monthly Archives: ಸೆಪ್ಟೆಂಬರ್ 2011

ಜನಪದದ ಶಿಖರ ಸೂರ್ಯನಿಗು ಬಿಡದ ಅಪವಾದದ ಕರಿಛಾಯೆ

ಅಪರೂಪದ ಭಾಷಾ ಸೊಗಡಿನ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಕೃಷಿ ಮಾಡಿದ ಚಂದ್ರಶೇಖರ ಕಂಬಾರರಿಗೆ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ಶ್ರೇಷ್ಠ ಪ್ರಶಸ್ತಿ ಜ್ಞಾನಪೀಠ ಒಲಿದು ಬಂದಿದೆ. ಬಯಲು ಸೀಮೆಯ ಗಡಸು ಭಾಷೆಯನ್ನೆ ತಮ್ಮ ಬರವಣಿಗೆಯ ಶೈಲಿಗೆ ಒಗ್ಗಿಸಿಕೊಂಡು ಬಂದ ಕಂಬಾರರ ಪ್ರತಿ ಕೃತಿಗಳಲ್ಲಿಯು ಅದರ ಸೊಗಡು ಗಾಢವಾಗಿ ಆವರಿಸಿರುವುದು ಅವರ ಬಹು ದೊಡ್ಡ ಹೆಗ್ಗಳಿಕೆ. ಜನಪದದ ಮೂಲಕ ಸಾಹಿತ್ಯಕ್ಕೆ ಕಂಬಾರರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ. ಕವಿತೆ, ಕಾದಂಬರಿ, ಸಂಶೋಧನಾ ಸಾಹಿತ್ಯ, ವಿಮರ್ಶೆ, ನಾಟಕಗಳು, ಚಲನಚಿತ್ರ ಗೀತೆಗಳಿಗೆ ಗೀತ ರಚನೆ, ನಿರ್ದೇಶನ ಹೀಗೆ ಹಲವು ಪ್ರಾಕಾರಗಳ ಮೂಲಕ ಕನ್ನಡ ಭಾಷೆಗೆ ಒಂದು ಔನ್ನತ್ಯ ತಂದು ಕೊಟ್ಟಿದ್ದಲ್ಲದೇ, ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸಾಕಾರಗೊಳಿಸಿ ನಾಡಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಸರಳ ಮಾತು ತಮ್ಮ ಎಂದಿನ ಜಾನಪದದ ಧಾಟಿಯಲ್ಲೇ ಸಮಕಾಲೀನ ಸ್ಥಿತಿಯನ್ನು ಅನಾವರಣಗೊಳಿಸುತ್ತಾ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧವಾಗಿಸಿದ ಕಂಬಾರರಿಗೆ ಜ್ಞಾನಪೀಠ ದಕ್ಕಿದ್ದು ಹೆಮ್ಮೆಯ ವಿಷಯ.

ಹಳ್ಳಿ ಸೊಗಡಿನ ಕವಿಗೆ ಹೆಮ್ಮಯ ಜ್ಞಾನಪೀಠ

ಹಳ್ಳಿ ಸೊಗಡಿನ ಕವಿಗೆ ಹೆಮ್ಮಯ ಜ್ಞಾನಪೀಠ

ಆದರೆ ಸಾಮಾನ್ಯವಾಗಿ ಪ್ರತಿ ಬಾರಿ ಯಾವುದೇ ಪ್ರಶಸ್ತಿಗಳು ಘೋಷಣೆಯಾದಾಗ ಅಪಸ್ವರದ ಅಲೆ ಎದ್ದೆ ಏಳುತ್ತದೆ. ಅರ್ಹ, ಅನರ್ಹ ಎಂಬ ಜಿಜ್ಞಾಸೆಗಳು ಗಿರಕಿ ಹೊಡೆಯಲಾರಂಭಿಸುತ್ತವೆ. ಅನಂತಮೂರ್ತಿ, ಕಾರ್ನಾಡರಿಗು ಜ್ಞಾನಪೀಠ ಬಂದಾಗ ಈ ರೀತಿಯ ‘ಚಕಾರಗಳು’ ಕೇಳಿ ಬಂದಿದ್ದವು. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಎಂಬ ಬಹು ದೊಡ್ಡ ಪ್ರಶ್ನೆಗಳು ಎದ್ದು ನಿಂತಿದ್ದವು. ಹೀಗಾಗಿ ಪ್ರಶಸ್ತಿಗಳ ಘೋಷಣೆ ಜೊತೆಗೆ ಅಪಸ್ವರಗಳು ಸಾಮಾನ್ಯ. ಆದರೆ ಇತ್ತೀಚಿಗೆ ಎಷ್ಟೋ ಪ್ರಶಸ್ತಿಗಳು ತಮ್ಮ ಘನತೆಯನ್ನು ಕಳೆದುಕೊಂಡು ಲಾಬಿದಾರರ ಪಾಲಾಗುತ್ತಿವೆ. ರಾಜ್ಯೋತ್ಸವ ಪ್ರಶಸ್ತಿಗೆ ಅದೆಂತಹ ಗತಿ ಬಂದಿದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಇತ್ತೀಚಿಗೆ ಯಾರಿಗಾದರು ಆ ಪ್ರಶಸ್ತಿ ಲಭಿಸಿದೆ ಎಂದರೆ ಅವರ ಅರ್ಹತೆಯನ್ನೆ ಒಂಟಿ ಕಣ್ಣಿನಿಂದ ನೋಡುವ ಹಂತ ತಲುಪಿದೆ. ಇದು ಕೇವಲ ರಾಜ್ಯೋತ್ಸವ ಪ್ರಶಸ್ತಿಗೆ ಮಾತ್ರವಲ್ಲ, ಆಸ್ಕರ್ ಘೋಷಣೆಯಾದಾಗಲು ಕೂಡಾ ಇಂತಹ ಕೂಗುಗಳು ಕೇಳಿ ಬರುತ್ತವೆ. ಅದರಲ್ಲಿಯು ‘ಸ್ಲಮ್ ಡಾಗ್ ಮಿಲೇನಿಯರ್ ‘ ಆಸ್ಕರ್ ದಕ್ಕಿದಾಗ ಅದರ ಹಿಂದೆ ಯಾವ ರೀತಿಯಲ್ಲಾ ಕಾಣದ ಕೈಗಳ ಕೆಲಸ ಇರಬಹುದು ಎಂಬ ದೊಡ್ಡ ಚರ್ಚೆ ಹುಟ್ಟು ಹಾಕಲಾಗಿತ್ತು. ಪ್ರಶಸ್ತಿ ದಕ್ಕಿಸಿಕೊಳ್ಳಲು ಎಂತೆಂತಹ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ, ಹೇಗೆಲ್ಲಾ ಓಲೈಕೆಗಳನ್ನು ಮಾಡಲಾಗುತ್ತದೆ ಎಂಬ ಊಹಾಲೋಕವೇ ಸೃಷ್ಟಿಯಾಗಿತ್ತು. ಅದರ ಸತ್ಯಾಸತ್ಯತೆ ಏನೇ ಇರಲಿ ಇಂದು ಪ್ರತಿ ಪ್ರಶಸ್ತಿಗು ಮಸಿ ಬಳಿಯುವದು ಒಂದು ಜಾಯಮಾನವೇ ಆಗಿದೆ. ಹಾಗೇ ಅನರ್ಹರು ಪ್ರಶಸ್ತಿಗಾಗಿ ಮುಗಿ ಬೀಳುವುದು ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಲೆ ಇದೆ.

ಕಂಬಾರರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 8ನೇ ಜ್ಞಾನಪೀಠ ಅವರ ಮುಡಿಗೇರಿದೆ. ಆದರೆ ಇಡೀ ನಾಡು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದರೆ, ನಾಡೋಜ ಪಾಟೀಲ ಪುಟ್ಟಪ್ಪ  ಮಾತ್ರ ಪ್ರಶಸ್ತಿ ಬಂದಿದ್ದರ ಬಗ್ಗೆ ಪ್ರೀತಿಯ ಮಾತುಗಳನ್ನಾಡುವ ಬದಲಿಗೆ, ಕ್ಯಾತೆ ತೆಗೆದಿದ್ದಾರೆ. ಈ ನಡುವೆ ಅರ್ಹರಾದವರಿಗೆ ಪ್ರಶಸ್ತಿಗಳು ಬರುತ್ತಿಲ್ಲ, ಬರೀ ಲಾಬಿ ಮಾಡುವವರಿಗೆ ಕೊಡಲಾಗುತ್ತಿದೆ ಎಂದು ಹೇಳಿದ್ದು ವಾಸ್ತವಿಕವಾಗಿ ಸರಿಯಿದದ್ದರು ಕಂಬಾರರ ವಿಷಯದಲ್ಲಿ ಅವರು ಈ ಮಾತು ಹೇಳಿದ್ದು ನಿಜಕ್ಕೂ ಅವರ ಹಿರಿತನಕ್ಕೆ ಒಪ್ಪುವಂತಹದ್ದಲ್ಲ. ಅವರು ಹೇಳುವಂತೆ ಭೈರಪ್ಪನವರಿಗೆ ಈ ಪ್ರಶಸ್ತಿ ಬಂದಿದ್ದರೆ ಹೆಚ್ಚು ಸೂಕ್ತ ಎಂದಿರುವುದು ತೆಗೆದು ಹಾಕಬಹುದಾದ ಮಾತಲ್ಲದಾಗಿದ್ದರು, ಹಾಗಂತ ಕಂಬಾರರ ಅರ್ಹತೆಯನ್ನು ಪ್ರಶ್ನಿಸುವುದು ಖಂಡಿತಾ ಸರಿಯಲ್ಲ. ಸಮಕಾಲೀನ ಲೇಖಕರಲ್ಲಿ ನಿಜಕ್ಕು ಅತೀ ಹೆಚ್ಚಿನ ಜನ ಮನ್ನಣೆ, ಸಾಹಿತ್ಯ ಪ್ರೌಢಿಮೆ ಮೆರೆದ ಭೈರಪ್ಪ ನಾಡು ಕಂಡ ಅಪರೂಪದ ಲೇಖಕರಲ್ಲಿ ಪ್ರಮುಖರು. ಆದರೆ ಕಂಬಾರರು ಅವರಷ್ಟು ಯೋಗ್ಯರಲ್ಲ ಎಂದು ಫರ್ಮಾನು ಹೊರಡಿಸುವುದು ಪಾಪು ಅವರ ಘನತೆಗೆ ಹೊಂದುವಂತಹದ್ದಲ್ಲ. ಈಗ ತಾನೇ ಭೈರಪ್ಪ ‘ಸರಸ್ವತಿ ಸಮ್ಮಾನ’ ಗೆ ಭಾಜನರಾಗಿದ್ದಾರೆ. ಅದು ಕೂಡಾ ಜ್ಞಾನಪೀಠದಷ್ಟೇ ಗೌರವ ಮತ್ತು ಮನ್ನಣೆಯನ್ನು ಪಡೆದದ್ದು. ಹೀಗಿರುವಾಗ ಭೈರಪ್ಪನವರನ್ನು ಬದಿಗೊತ್ತಿ ಕಂಬಾರರು ಪ್ರಶಸ್ತಿಯನ್ನು ‘ಹೊಡೆದು ಕೊಂಡಿದ್ದಾರೆ’ ಎಂಬುದು ಬಾಲಿಷ ಅಪವಾದ ಎನಿಸಿಕೊಳ್ಳುತ್ತದೆ. ಇಂದಲ್ಲ ನಾಳೆ ಭೈರಪ್ಪ ಕೂಡಾ ಈ ಪ್ರಶಸ್ತಿಗೆ ಭಾಜನರಾಗಬಹುದು. ಹಾಗಂತ ಇದೇ ಸಾರಿ ಸರಸ್ವತಿ ಸಮ್ಮಾನ ಹಾಗೂ ಜ್ಞಾನಪೀಠ ಎರಡು ಅವರಿಗೆ ಲಭಿಸ ಬೇಕಿತ್ತು ಎಂಬ ಆತುರ ಯಾಕೆ. ಒಬ್ಬಲೇಖಕ ಯಾವ ಪ್ರಶಸ್ತಿ ಪಡೆದಿದ್ದಾನೆ ಎಂಬುದಕ್ಕಿಂತ, ಅವರ ಎಷ್ಟು ಲೇಖನಗಳು ಜನರನ್ನು ತಲುಪಿವೆ ಎಂಬುದು ಕೂಡಾ ಪ್ರಮುಖವಾಗುತ್ತದೆ. ಈ ವಿಷಯದಲ್ಲಿ ಭೈರಪ್ಪ ಮತ್ತು ಕಂಬಾರರು ಒಂದೇ ತೂಕ ತೂಗಬಲ್ಲರು ಎಂಬುದು ನನ್ನ  ವೈಯಕ್ತಿಕ ಅಭಿಪ್ರಾಯ. ಹಾಗಾಗಿ ಸಂಭ್ರಮದ ಸಮಯದಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿ ಎಲ್ಲವನ್ನು ಅಯೋಮಯಗೊಳಿಸುವ ಕೆಲಸ ನಿಜಕ್ಕು ಅಕ್ಷಮ್ಯ.

ಕಂಬಾರರು ತಮ್ಮ ದೇಸಿ ಬಾಷೆಯ ಸೊಗಡಿನಿಂದಲೆ ಎಲ್ಲರಿಗು ಹತ್ತಿರವಾದವರು. ಅವರ ನಾಟಕಗಳು, ಕಾದಂಬರಿ ಮತ್ತು ಕಾವ್ಯಗಳ ಮೂಲಕ ಸಮಕಾಲೀನ ಸ್ಥಿತಿಯನ್ನು ಪ್ರತಿಬಿಂಬಿಸಿದವರು. ಅವರು ಈ ಟೀವಿಯ ಮೂಡಲ ಮನೆ ಧಾರಾವಾಹಿಗೆ ಬರೆದ ಶೀರ್ಷಿಕೆ ಗೀತೆ ‘ರೆಂಬೆ ಕೊಂಬೆ ಮೇಲೆ ಗೂಡು ಕಟ್ಟಿದ ಹಕ್ಕಿ’  ಹಾಗೂ ಮಹಾನವಮಿ ಧಾರಾವಾಹಿಯ  ‘ಕೈಯ ಮುಗಿಯುವೆ’ ಹಾಡು ಇಂದಿಗು ಎಲ್ಲರ  ನಾಲಿಗೆ ಮೇಲೆ ಹರಿದಾಡುತ್ತಿವೆ. ಅದು ಕಂಬಾರರ ಸಾಹಿತ್ಯಕ್ಕಿರುವ ಸೆಳೆತ. ಕೇವಲ ಸಾಹಿತ್ಯ ರಚನೆಗಷ್ಟೇ ಅಲ್ಲ ,ಕನ್ನಡ ಭಾಷೆಯ ಕಳಕಳಿಗೆ ಕೂಡಾ ಈ ಪ್ರಶಸ್ತಿ ಸಂದಾಯವಾಗಬೇಕಾದದ್ದು. 1998ರಲ್ಲಿ ಕಾರ್ನಾಡರಿಗೆ ಲಭಿಸಿದ 13 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಜ್ಞಾನಪೀಠ ಬಂದದ್ದು ಅದರಲ್ಲು ಉತ್ತರ ಕರ್ನಾಟಕದ ಸೊಗಡಿನ ಬರಹಗಾರ ಕಂಬಾರರಿಗೆ ದೊರಕಿದ್ದು ಸಂಭ್ರಮಕ್ಕೆ ಪಾರವಿಲ್ಲದಂತಾಗಿದೆ.

ಕಂಬಾರರೇ, ನಿಮಗೆ ಕೋಟಿ ಅಭಿನಂದನೆಗಳು…….

Advertisements
 
1 ಟಿಪ್ಪಣಿ

Posted by on ಸೆಪ್ಟೆಂಬರ್ 24, 2011 in ಭಾವದ ಬಿಂಬಗಳು

 

ಟ್ಯಾಗ್ ಗಳು:

ರೂಪಾಯಿ ರಾಜ…!!!!!!

ಈ ನೋಟಿನ ಮೇಲೆ ಬರೆದಿರುವ ಅಕ್ಷರಗಳ ಮೇಲೆ ಕೊಂಚ ಕಣ್ಣಾಡಿಸಿ. ಹಣ ಕಂಡರೆ ಹೆಣವು ಬಾಯಿಬಿಡುತ್ತದೆ ಎಂದು ಹೇಳುವಾಗ ‘ಈ ಹಣ ಪಡೆದವರು ಹೆಣವಾಗುತ್ತಾರೆ’, ಎಂಬ ಹೇಳಿಕೆ ನೋಡಿದರೆ ನಗಬೇಕೋ, ಅಳಬೇಕೋ ನೀವೆ ಹೇಳಿ. ದಾಸರೆ ಹೇಳಿದ್ದಾರೆ, ‘ಹಣವೇ ನಿನ್ನ ಗುಣವೇನು ಬಣ್ಣಿಸಲಿ, ಹಣವಿಲ್ಲದವ ಹೆಣಕು ಕಡೇ ಕಂಡೆ’, ಎಂದಿರುವಾಗ ಸಿಕ್ಕ ದುಡ್ಡನ್ನ ಎಸೆಯೋದಿಕ್ಕಾಗುತ್ತಾ! ಕೊಂಚ ನಗೆ ಉಕ್ಕಿಸಿದರು, ನೋಟಿನ ಮೇಲೆ ಇಂತಹ ವಿಕಾರಗಳನ್ನು ಸೃಷ್ಟಿಸುವುದು ಎಂತಹ ಹೇಯ ಮನಸ್ಥಿತಿ ಎಂದೆನಿಸುತ್ತದಲ್ಲವೆ! ಏಕೆಂದರೆ ನನಗನ್ನಿಸಿದಂತೆ It Happens Only In India!?

ಹಣವೇ ನಿನ್ನ (ಅವ)ಗುಣವೇನು ಬಣ್ಣಿಸಲಿ...

ಹಣವೇ ನಿನ್ನ (ಅವ)ಗುಣವೇನು ಬಣ್ಣಿಸಲಿ...

 

ಟ್ಯಾಗ್ ಗಳು:

 
%d bloggers like this: