RSS

Monthly Archives: ಜನವರಿ 2011

ಆಡುವ ಮನಸಿನಲ್ಲಿ ಅದೆಷ್ಟು ಸಣ್ಣ..ಸಣ್ಣ…ಕನಸುಗಳಿದ್ದವು……

ಅದು ಹಸಿ ಉಗುರಿನಿಂದ ನೆಲ ಗೆಬರಿ ಸಿಕ್ಕಿ ಹಾಕಿಕೊಂಡ ಕರಿ ಮಣ್ಣನ್ನು ನೋಡಿ ಪ್ಯಾಲಿ ನಗು ನಗುವ ವಯಸು. ಮುರಿವ ಆಟಿಕೆ ಜೋಡಿಸುವದಕ್ಕಿಂತ ಅಂದದ ಆಟಿಕೆ ತುಂಡರಿಸುವ ಹುಂಬತನ. ಅದು ದ್ವೇಷವಿಲ್ಲದ ಜಗಳ ಕಾಯುವ ಮನಸು, ಹೊಡೆದ ಏಟಿಗೆ ಕ್ಷಮೆ ಕೇಳುವ ವಯಸು. ಅದು ಶುದ್ಧ ಬಾಲ್ಯ. ಮುಗ್ಧ ತುಂಟತನ, ಸ್ನಿಗ್ಧ ನಗು. ಅದಕ್ಕೆ ಯಾವ ಪದಗಳ ವಿವರಣೆ ನೀಡಲಿ….

ಕತ್ತಲೆಗೆ ಹೆದರುತ್ತಿದ್ದೆ, ಬೆತ್ತಲೆಗೆ ಸಣ್ಣದಾಗಿ ನಾಚುತ್ತಿದ್ದೆ.ಕೋಪಕ್ಕೆ ನಡುಗುತ್ತಿದ್ದೆ, ಪ್ರೀತಿಗೆ ಕುಣಿಯುತ್ತಿದ್ದೆ. ಕಳೆದು ಹೋದ ಬಾಲ್ಯದ ನೆನಪಿನ ಪಳೆಯುಳಿಕೆಗಳು ಮಾತ್ರ ಈಗ ನನ್ನ ಮುಂದೆ. ಮಕ್ಕಳಾಗುವುದರಲ್ಲಿನ ಬಹು ದೊಡ್ಡ ಲಾಭ ಈಗ ಕಣ್ಣೀಗೆ ಮತ್ತು ಮನಸಿಗೆ ರಾಚುತ್ತಿದೆ. ಮತ್ತದೆ ಅದೇ ಬೇಸರ…ಅದೇ ಸಂಜೆ…..

ನಾನಾಗ ಸಣ್ಣವನಿದ್ದೆ. ವಯಸ್ಸಿನಲ್ಲು, ಮನಸ್ಸಿನಲ್ಲೂ. ಆಸೆಗಳು ಗರಿಗೆದರುತ್ತಿದ್ದವು,ಬಯಕೆಗಳು ಚಿಗುರೊಡೆಯುತ್ತಿದ್ದವು, ಕನಸುಗಳು ಒಡ ಮೂಡುತ್ತಿದ್ದವು ಎಷ್ಟು ಸುಂದರ ಅಂತೀರಿ…ಬಸ್ಸಿನ ಮುಂಭಾಗದಲ್ಲಿ ಕುಡುತ್ತಿದ್ದೆ. ಅದರ ವೇಗಕ್ಕೆ ಪುಳಕಗೊಳ್ಳುತ್ತಿದ್ದೆ. ತಿರುವುಗಳಲ್ಲಿ ಆತಂಕಗೊಳ್ಳುತ್ತಿದ್ದೆ. ಹಾಗೆ ಅದನ್ನೆಲ್ಲಾ ನಿಯಂತ್ರಿಸುವ ಡ್ರೈವರ ಕಡೆ ಬೆಕ್ಕಸ ಬೆರಗಾಗಿ ನೋಡುತ್ತಿದ್ದೆ. ನನಗನಿಸುತ್ತಿದ್ದದು ಒಂದೇ, ನಾನು ಇಂಜೀನಿಯರ್ ಆಹಬೇಕಿಲ್ಲ. ಡಾಕ್ಟರ್ ಮೊದಲೆ ಬೇಡ….ವ್ಯಾಪಾರ ವ್ಯವಹಾರ ಬಿಲ್ ಕುಲ್ ಅರ್ಥವಾಗುವುದಿಲ್ಲ. ಶಿಕ್ಷಕನಾಗುವುದರಲ್ಲಿ ಯಾವ ಮಜ ಇಲ್ಲಾ. ನಾನೇನಿದ್ದರು ಹಾಗಾಗಬೇಕು. ಹಿಂದೆ ನೂರಾರು ಜನಗಳು ಅವರ ಮುಂದೆ ನಾನು. ಅಲ್ಲಿ ನಾನು ಮಾತ್ರ. ನಾನೆಂದರೆ ಎಲ್ಲರಿಗು ಏನೋ ಅಭಿಮಾನ. ಅವರೆಲ್ಲರ ಭವಿಷ್ಯ ನನ್ನ ಕೈಯಲ್ಲಿ. ನಾನೇನಿದ್ದರು ಅವನಂತಾಗಬೇಕು. ಅವನು ಏಂದರೆ ನನ್ನ ಬಸ್ಸಿನ ಡ್ರೈವರ್. ನಾನಾಗಬೇಕು ಬಸ್ಸಿನ ಡ್ರೈವರ್. ಹಾಗೆ ಒಂದು ಸಣ್ಣ ಕನಸು ಗೊತ್ತೆ ಆಗದಂತೆ ಚಿಗುರೊಡೆದಿತ್ತು. ಅವನ ಕಾಲಿನ ಚಲನೆ ಗಮನಿಸುತ್ತಿದ್ದೆ. ಗೇರ್ ಗಳನ್ನು ಚಾಕಚಕ್ಯತೆಯಿಂದ ಬದಲಿಸುವುದನ್ನು ಕಣ್ಣು ಪಿಳುಕಿಸದೆ ನೋಡುತ್ತದೆ. ಸ್ಟೇರಿಂಗ್ ನಿಯಂತ್ರಿಸುವ ಜಾನತನಕ್ಕೆ ಸುಮ್ಮನೆ ತಲೆ ಬಾಗುತ್ತಿದ್ದೆ. ನಾನು  ಡ್ರೈವರ್ ಆಗಬೇಕು. ಅದು ನಮ್ಮ ಊರಿಗೆ ಬರುವ ಶುದ್ಧ ಕೆಂಪು ಬಸ್ಸಿನ ಡ್ರೈವರ್. ಮನೆಗೆ ಬಂದವನೆ ಒಂದು ತೆಳುವಾದ ಹಗ್ಗ ನೋಡತ್ತಿದ್ದೆ. ಅದನ್ನು ಏರಡು ತುದಿಯಲ್ಲಿ ಗಂಟು ಹಾಕಿ ಜೋಡಿಸಿ ಅದರೊಳಗೆ ನಾನು ತೂರಿ ಹಿಂದೆ ಗೆಳೆಯರಿಗೆ ಸೇರಿಕೊಳ್ಳಲು ಹೇಳುತ್ತಿದ್ದೆ. ನಾನಾದೆ ಡ್ರೈವರ್. ಗಾಡಿ ಸ್ಟಾರ್ಟ, ಗೇರ್ ಆನ್, ಏಕ್ಸಿಲೇಟರ್ ಒತ್ತು ನುಗ್ಗು ಮುಂದೆ. ಕನಸು ಫಲಿಸಿತ್ತು… ನಾನಾಗಿದ್ದೆ ನನ್ನ ಜೀವನದ ಗುರಿಯಾಗಿದ್ದ ಬಸ್ಸಿನ ಡ್ರೈವರ್…..ಗೇಮ್ ಫೀನಿಷ್….ಗೋಲ್ ಮಟಾಷ್…..

ಋಣಿ : in.reuters.com

ಋಣಿ : in.reuters.com

ನಾನಾಗ ಬೇಕೆಂದಿದ್ದೆ ಅಂದು ಕಂಡಕ್ಟರ್. ಅವನು ಟಿಕೆಟ್ ಕೇಳುವ ರೀತಿಗೆ, ಲೆಕ್ಕ ಹಾಕುವ ಚಾಲಾಕಿತನಕ್ಕೆ, ಟಿಕೆಟ್ ಹರಿಯುವ ನೈಪುಣ್ಯತೆಗೆ, ಸೀಟಿ ಊದುವ ಶಕ್ತಿಗೆ. ಅವನು ಬಂದನೆಂದರೆ ಎಲ್ಲರ ಕೈಯಲ್ಲಿ ದುಡ್ಡು. ಎಲ್ಲರ ಮೇಲು ಜೋರು.ಹಳ್ಳಿಗರೆಂದರೆ ಅಬ್ಬರ. ಯಪ್ಪ, ಯಣ್ಣ ಎನ್ನುವ ಜನರು. ನನಗು ಅನಿಸುತ್ತಿತ್ತು…ನಾನಾಗ ಬೇಕು ಕಂಡಕ್ಟರ್. ಅವನು ಟಿಕೇಟ್ ಕೊಟ್ಟು ಬಂದನೆಂದರೆ ಅವನೆಗೆಂದಿದ್ದ ಸೀಟು ಬಿಟ್ಟು ಕೊಡಲೆ ಬೇಕು. ಕಿಕ್ಕಿರಿದ ಬಸ್ಸಿನಲ್ಲು ಮೀಸಲಾತಿ. ಹೇಗಿದೆ ಕೆಲಸ. ನಾನಾಗ ಬಯಸಿದ್ದೆ ಅದಕ್ಕೆ ಕಂಡಕ್ಟರ್. ಮತ್ತೆ ಗುರಿಯಡೆಗೆ ನಡಿಗೆ. ಹುಡುಗರನ್ನೆಲ್ಲಾ ಕರೆದಿದ್ದೆ. ಡ್ರೈವರ್ ಕೆಲಸಕ್ಕೆ ರಾಜೀನಾಮೆ ಬೀಸಾಕಿಯಾಗಿತ್ತು. ನಾನೀಗ ಏನಿದ್ದರು ಕಡಕ್ಟರ್. ಆಗ ಬರುತ್ತಿದ್ದ ಸಣ್ಣ ಬ್ಯಾಟರಿ (ನಿಪ್ಪೋ ಶೆಲ್)ಯ ರಟ್ಟಿನ ಡಬ್ಬ ಕೈಗೆ ಸಿಗುತ್ತಿತ್ತು. ಅದು ಏರಡು ಕಡೆಗೆ ಓಪನ್ ಮಾಡುವಂತಹದ್ದು. ಅದರ ಮಧ್ಯ ಒಂದು ರಟ್ಟು. ಅದಕ್ಕೆಲ್ಲಾ ನಾನು ಆಯ್ಕೊಂಡು ಬಂದ ಟಿಕೆಟ್ಟ ಅಂಟಿಸಿ ಬಿಟ್ಟರೆ ಮುಗಿಯಿತು, ನಾನಾಗಿದ್ದೆ ನನ್ನ ಬಯಕೆಯಾಗಿದ್ದ ಕಂಡಕ್ಟರ್. ಆಸೆ ತೀರಿತು. ಆಟ ಮುಗಿಯಿತು……

ಆಡು...ಆಟ ಆಡು.........

ಆಡು...ಆಟ ಆಡು.........

ಅದೆಷ್ಟೋ ನನ್ನ ಕನಸುಗಳು ನಿರಾಯಾಸವಾಗಿ ಈಡೇರಿದ್ದು ಹೀಗೆ ಅಲ್ವಾ. ಶಿಕ್ಷಕನಾಗಿದ್ದೆ. ಆರ್ಮಿ ಮ್ಯಾನ್ ಆಗಿದ್ದೆ, ಡಾಕ್ಟರ್ ಆಗಿದ್ದೆ, ವ್ಯಾಪಾರಿಯಾಗಿದ್ದೆ…ಇನ್ನು ಏನೇನೋ…..ಕನಸುಗಳು ಸಾಕಾರಗೊಳಿಸಿಕೊಳ್ಳುವ ಅತೀ ಸರಳ ಮಾರ್ಗ ಲಭಿಸುತ್ತಿದ್ದುದೆ ಹೀಗೆ.

ಈಗಲು ಕನಸುಗಳಿವೆ. ಸದಾ ಚಿಗುರೊಡೆಯುತ್ತಲೆ ಇವೆ.ಸಾಕಾರಗೊಳಿಸಿಕೊಳ್ಳಲು ಮನಸು ತಹ ತಹಿಸುತ್ತಿದೆ. ಆದರೆ ನಾನೀಗ ಚಿಕ್ಕವನಾಗಿಲ್ಲ. ಮನಸ್ಸು ಮಾಗಿ ಮೇಲೇರಿ ನಿಂತಿದೆ. ಅದಕ್ಕೆ ಸುಳ್ಳು ಆಯಾಮಗಳು ರುಚಿಸಲ್ಲ. ಅದು ಅಷ್ಟಿಷ್ಟಕ್ಕೆ ತೃಪ್ತಿಪಟ್ಟು ಕೊಳ್ಳುವಂತಹದ್ದು ಅಲ್ಲ. ಅದನ್ನು ತಣಿಸುವ ಪರಿ ಈಗ ನನ್ನ ಬಳಿಯಿಲ್ಲ. ಏಕೆಂದರೆ ನಾನೀಗ ದೊಡ್ಡವನಾಗಿದ್ದೇನೆ…….

Advertisements
 

ಟ್ಯಾಗ್ ಗಳು: ,

ಕಟ್ಟದೆ..ಕೆಡುಹದೆ..ಕಳೆದು ಹೋಯಿತು 2010….

ಅದೆಷ್ಟು ನಿರೀಕ್ಷೆಗಳನ್ನು ಹುಟ್ಟಿಸಿ ಚಿಗುರೊಡೆದು ಬೃಹದಾಕಾರವಾಗಿ ನಿಂತ ಕಳೆದ ವರ್ಷ  2010 ಯಾವ ಆಸೆ ಇಡೇರಿಸದೆ, ಬೆಚ್ಚನೆಯ ಭರವಸೆ ನೀಡದೆ, ಅಬ್ಬರಿಸಿ, ಬೊಬ್ಬಿರಿದು ಕಳೆದು ಹೋಯಿತು. ಜೀವಮಾನದಲ್ಲಿ 1 ವರ್ಷವು ವೃಥಾ ವ್ಯರ್ಥವಾಗಿದ್ದು ಬಿಟ್ಟರೆ ಅಂತಹ ಹೇಳಿಕೊಳ್ಳುವಂತಹ ಯಾವ ಸವಿ ನೆನಪುಗಳನ್ನು ಚಿತ್ರಿಸದೆ ವಿಕಾರ ಆಕೃತಿಯಂತೆ ಮೂಡಿ ಮರೆಯಾಗಿ ಹೋಯಿತು. ಇದು ನನ್ನ ಪಾಲಿನ 2010…

ಪ್ರತಿ ಹೊಸ ವರ್ಷವು ಒಂದಿಷ್ಟು ಕನಸುಗಲನ್ನು ಹೊತ್ತು ತರುತ್ತೆ. ಅದೇನೋ ಅಗೋಚರ ಪುಳಕಗಳಿಗೆಲ್ಲ ಜೀವ ತುಂಬುತ್ತೆ. ಆಕಾಶಕ್ಕೆ ಕೈ ಹಾಕಿ ಬಿಡು ಎಂದು ಹುರಿದುಂಬಿಸುತ್ತೆ. ಆದರೆ ಮುಗುಚಿ ಬಿದ್ದು ತಿರುಗಿ ನೋಡಿದಾಗ  ಆ ವರ್ಷ ಕಳೆದು ಮತ್ತೊಂದು ವಸಂತ ಮುಗುಳ್ನಗುತ್ತಾ ಕಣ್ಣೇದುರಿಗೆ ನಿಂತಿರುತ್ತೆ. ಇದು ಪ್ರತಿ ಸಾರಿ ನಡೆಯುವ ಕಾಲ ಚಕ್ರ. ವೈಯಕ್ತಿಕವಾಗಿ ಕಳೆದ ವರ್ಷ ನನಗೆ ಆಸೆ ಚಿಗುರಿಸಿದ್ದಕ್ಕಿಂತ ಭರವಸೆ ಕಮರಿಸಿದ್ದೆ ಹೆಚ್ಚು. ಅದೆಷ್ಟೋ ಹೊಸತನಕ್ಕೆ ಕೈ ಚಾಚಿದೆ, ಅದೇನೋ ಕನಸುಗಳಿಗೆ ರೂಪ ನೀಡಿದೆ, ಎಲ್ಲಿಯದೋ ಚೈತನ್ಯ ತುಂಬಿಕೊಂಡು ರೆಕ್ಕೆ ಕಟ್ಟಿಕೊಂಡು ಹಾರಲು ಸಜ್ಜಾದೆ ಎಲ್ಲವೂ ಬರೀ ಭ್ರಮೆಯಾಗಿ ಹೋದವು. ಯಾವುದು ಸಾಕಾರಗೊಳ್ಳದ ಭಗ್ನ ಕನಸುಗಳಂತೆ ಮೂಡಿ ಮರೆಯಾಗಿ ಹೋದವು. ಅದ್ಯಾವ ಹೆಮ್ಮೆಗೆ ನಾನು ಕಳೆದ ವರ್ಷವನ್ನು ನೆನಪಿಟ್ಟು ಕೊಳಬೇಕೋ ತಿಳಿಯದು….

 

ನಾನು ಭಾವಿಸುವಂತೆ ಪ್ರತಿಯೊಬ್ಬನ ಜೀವಮಾನದಲ್ಲಿ 1 ವರ್ಷ ಎಂಬುದು ಬಹು ಪ್ರಮುಖ ಮತ್ತು ಅಗಾಧವಾದ ಬದಲಾವಣೆಗಳನ್ನು ತರುಬಲ್ಲ ಕಾಲಮಾನ. ಮನಸ್ಸು ಮಾಡಿದರೆ ವ್ಯಕ್ತಿ ಕೆಳಗಿದ್ದವನು ಮೇಲೆಲ್ಲೊ ಹತ್ತಿ ಕೂರಬಲ್ಲ. ನಸೀಬು ಖೊಟ್ಟಿಯಾಗಿದ್ದರೆ ರೂಪಾಯಿಗೂ ಜೇಬು ತಡಕಾಡುವಂತಹ ಸ್ಥಿತಿಗೆ ಬಂದು ನಿಲ್ಲಬಹುದು. ಹಾಗಿದ್ದಾಗ ಒಂದು ವರ್ಷ ಸುಖಾಸುಮ್ಮನೆ ಕಳೆದು ಹೋದರೆ ಜೀವ ಚುರ್ರ…ಎನ್ನುತ್ತದೆ. ಆದರೆ ಕಳೆದು ಹೋದುದ್ದರ ಅವಲೋಕನ ಮಾಡದಿದ್ದರೆ ಮುಂದೆ ಬರುವುದರ ಬಗ್ಗೆ ಒಂದು ಅಂದಾಜು ಸಿಗದೆ ಹೋಗಬಹುದು. ಆದ್ದರಿಂದ ಮತ್ತೆ ಹಿಂದೆ ಬಂದು ಹೋದ ಕರಾಳ ವರ್ಷದ ಬಗ್ಗೆ ಪೇಚಾಡುತ್ತಾ ಕುಡುವ ಬದಲು ಈ ವರ್ಷದ ನಕ್ಷೆ ಸಜ್ಜು ಮಾಡುತ್ತಿದ್ದೇನೆ. ಯಾಕೆಂದರೆ ಕವಿ ನುಡಿಯಂತೆ “ಸನಿ ನೆನಪುಗಳು ಬೇಕು ಸವಿಯಲು ಬದುಕು…”

2011 ಮತ್ತೆ ಅದೆಷ್ಟೋ ಭರವಸೆಗಳನ್ನು ಮೂಡಿಸಿದೆ. ಕೈ ಚಾಚಿ ನೂರೆಂಟು ಆಮಿಷಗಳನ್ನು ಒಡ್ಡುತ್ತಿದೆ.ಮೋಹಕ ನಗೆ ಬೀರಿ ಮನಸ್ಸಿನಲ್ಲಿಯೆ ಮಂಡಕ್ಕಿ ತಿನ್ನಲು ಪ್ರೇರೇಪಿಸುತ್ತಿದೆ. ಹಾಗಿದ್ದಾಗ ಅದು ಹೇಗೆ ಕನಸುಗಳನು ಕಟ್ಟದೆ ಉಳಿಯಬಲ್ಲೆ ನೀವೆ ಹೇಳಿ. ಒಂದಿಷ್ಟು ಸಾಕಾರಗೊಳಬೇಕಾದ ಬಯಕೆಗಳಿವೆ.ಸಣ್ಣ ಪುಟ್ಟ ಕೆಲಸಗಳು ಕೈಗೂಡಬೇಕಿವೆ. ಅರ್ಧಕ್ಕೆ ನಿಂತ ಯೋಚನೆಗಳು ಮತ್ತು ಯೋಜನೆಗಳಿಗೆ ಚಾಲನೆ ನೀಡಬೇಕಿದೆ. ಇವುಗಳೆಲ್ಲಾ ಮೂರ್ತ ರೂಪ ಪಡೆಯಲಿ ಎಂದು ಆಶಿಸುತ್ತಾ ನಿಮ್ಮೆಲ್ಲರ ಜೊತೆ ನಾನಯ ಬಾಚಿ ಹೊಸ ವರುಷವನ್ನು  ಬರಮಾಡಿಕೊಳ್ಳುತ್ತದ್ದೇನೆ. I WISH  “GOOD TO HAPPEN IN 2011 FOR ALL”

 

ಟ್ಯಾಗ್ ಗಳು:

 
%d bloggers like this: