RSS

Monthly Archives: ಅಕ್ಟೋಬರ್ 2010

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು….

ಥೂ!!! ಅಂತ ಕ್ಯಾಕರಿಸಿ ಉಗಿದರು ಈ ಜನ ಬದಲಾಗಲ್ಲರೀ. ರಾಜಕೀಯ ಅಂದೆರೇನೆ ಹಾಗೆನೇ. ಮೂರು ಬಿಟ್ಟವನು ಊರಿಗೆ ದೊಡ್ಡವನು ಎನ್ನುವಂತೆ. ಇತ್ತೀಚಿಗೆ ತತ್ವ, ಸಿದ್ಧಾಂತ ಆದರ್ಶದ ಮಾತುಗಳೇನಾದರು ರಾಜಕಾರಣಿ ಬಾಯಲ್ಲಿ ಬಂದರೆ ಅದು ಭೂತ ಭಗವದ್ಗೀತೆ ಹೇಳಿದಂತಾಗುತ್ತದೆ. ಇಲ್ಲಾ ಖಂಡಿತಾ ಅಸಾಮೀ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾನೆ ಎಂಬುದು ಸ್ಪಷ್ಟವಾಗುತ್ತೆ. ಉಘೇ..ಉಘೇ… ಇಂಡಿಯಾ….

ಆಡಿಸಿ ನೋಡು ಬೀಳಿಸಿ ನೋಡು ನಾ ಉರುಳೆನು

ಆಡಿಸಿ ನೋಡು ಬೀಳಿಸಿ ನೋಡು ನಾ ಉರುಳೆನು

 

ನೈತಿಕತೆಯ ಅಧಃಪತನದ ಬಗ್ಗೆ ನಾನು ಮಾತನಾಡಲು ಹೋಗುತ್ತಿಲ್ಲ. ಅದು ಇಂದು ರಾಜಕೀಯದಿಂದ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಆದರೆ ಜವಾಬ್ದಾರಿ ಕೂಡಾ ಮರೆತು ಹೋಗಿದೆ ಎಂದರೆ ನಮ್ಮೆಲ್ಲರ ದೌರ್ಭಾಗ್ಯ ಅಂದಷ್ಟೇ ಹೇಳಬಹುದೇನೋ. ಕಳೆದೊಂದು ವಾರದಿಂದ ಕರ್ನಾಟಕದ ರಾಜಕೀಯ ತಿಣುಕಾಟ ನೋಡುತ್ತಿರುವ ಎಲ್ಲರಿಗು ಈ ದೇಶದ ಭವಿಷ್ಯ ಸ್ಪಷ್ಟವಾಗಿ ಗೋಚರಿಸಿರುತ್ತದೆ. ನಾವು ಆಯ್ಕೆ ಮಾಡಿ ಕಳಿಸಿದ ಜನ ಪ್ರತಿನಿಧಿಯೆ ತೀರಾ ಲಜ್ಜೆಗೆಟ್ಟು ವರ್ತಿಸುವದನ್ನು ನೋಡುವ ಕರ್ಮ ನಮ್ಮದಾಗಿದ್ದಕ್ಕೆ ಯಾರನ್ನ ಹಳೆದು ಏನು ಪ್ರಯೋಜನ. “ಕಿಸ್ಸಾ ಕುರ್ಸಿ ಕಾ” ಎಂಬಂತೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಮಾರಟಕ್ಕೆ ನಿಂತಿರುವದನ್ನು ನೋಡಿದರೆ ನಾವು ಆಯ್ಕೆ ಮಾಡಿದ್ದು ಅದೆಂತಹಾ ಅಯೋಗ್ಯರನ್ನ ಎಂಬುದು ಕಣ್ನಿಗೆ ರಾಚುತ್ತದೆ.ಸರಕಾರ ಉರುಳಿಸಲು ಹಣ, ಹಾಗೆಯೇ ಉಳಿಸಲು ಹಣ. ಅಬ್ಬಾ ಅದೆಷ್ಟು ಕೋಟಿಗೆ ನಮ್ಮ  ಶಾಸಕರು ಮಾರಾಟವಾದರು ಕೇಳಿದರೇನೆ ಅವರ ಯೋಗ್ಯತೆ ಅರ್ಥವಾಗುತ್ತೆ.

ಹಣವೊಂದಿದ್ದರೆ ರಾಜಕೀಯ ಎಷ್ಟು ಸರಾಗ  ಎಂಬುದನ್ನು ಈ ಇಡೀ ಪ್ರಹಸನ ತೋರಿಸಿ ಕೊಟ್ಟಿತು. ರೇಣುಕಾಚಾರ್ಯನಂತಹ ಗೊಸುಂಬೆ, ಅತೃಪ್ತ ಶಾಸಕರಂತಹ ಬೇಜವಾಬ್ದಾರಿಗಳು, ವರ್ತೂರಂತಹ ಸಮಯ ಸಾಧಕರು, ಬಿಜೆಪಿಯಂತಹ ಕಮಂಗಿಗಳು, ವಿರೋಧ ಪಕ್ಷಗಳಂತಹ ಅಧಿಕಾರ ದಾಹಿಗಳು ಇವೆಲ್ಲವುಗಳ ಒಟ್ಟು ಮೊತ್ತವೆ ಇಂದಿನ ದುರ್ಗತಿ ಎಂದು ಹೇಳಬಹುದು. ತೀರಾ ಹೊಣೆಗೇಡಿಗಳಂತೆ ವಿಧಾನಸಭೆಯಲ್ಲಿ ದೊಂಬಿ ಎಬ್ಬಿಸಿದಾಗಲೆ ಇವರ ಇಡೀ ಮುಖವಾಡ ಕಳಚಿ ಬಿದ್ದ್ದದ್ದು. ಎಲ್ಲರದ್ದು ಅದೇ ರಾಗ ಅದೇ ಹಾಡು. ಆದರೆ ಬಡಾಯಿ ಮಾತ್ರ ಊರಗಲ. ಒಟ್ಟಿನಲ್ಲಿ ಪ್ರಜಾ ಪ್ರಭುತ್ವದಲ್ಲಿ ಮಹತ್ತರ ಪಾತ್ರವಹಿಸುವ ಶಾಸಕಾಂಗದ ಭಾಗವಾದ ನಮ್ಮ ಶಾಸಕರು ನಡೆದು ಕೊಂಡ ರೀತಿ ಮಾತ್ರ ಇಡೀ ದೇಶವೆ ತಲೆ ತಗ್ಗಿಸುವಂತಹದ್ದು. ಸಮರ್ಥ ಸರಕಾರ ಸಿಗುತ್ತೆ ಎಂಬ ಜನಕ್ಕೆ ಎರಡುವರೆ ವರ್ಷದಲ್ಲಿಯೆ ಭ್ರಮನಿರಸನವಾಗಿದ್ದು ಮಾತ್ರ ವಿಪರ್ಯಾಸ.

 

Advertisements
 

ಟ್ಯಾಗ್ ಗಳು:

ಬಸಿರಾದರು ಬಾಣಂತಿತನ ಭಾಗ್ಯ ಬಂದಿರಲಿಲ್ಲ….

ಇದೆಂಥಾ ದೌರ್ಭಾಗ್ಯವೋ ನಾ ಕಾಣೆ. ಅದೆಷ್ಟು ದಿನಗಳಿಂದ ನನ್ನಲ್ಲಿ ಈ ಬಸಿರನ್ನು ಬಸೆಯುವ ಬಯಕೆಯಾಗುತ್ತಿದ್ದರು, ಅತಿಯಾದ ಆಲಸಿತನ ನನ್ನನ್ನು ಈ ಪರಮ ಸುಖದಿಂದ ಗಾವುದ ದೂರ ನಿಲ್ಲಿಸಿತ್ತು. ಹೆರಿಗೆಯ ನೋವಿತ್ತು, ಹಡೆಯುವ ತವಕವಿತ್ತು, ಬಾಣಂತಿಯಾಗಿ ಸುಖಪಡುವ ಆಸೆಯಿತ್ತು. ಹೊಟ್ಟೆ ಸೀಳಿ ಬರುವ ಮಗುವನ್ನು ನೋಡಿ ಸಂಭ್ರಮಿಸುವ ತೀವ್ರತೆ ಮೊದಲೆಯಿತ್ತು. ಆದರೆ ಅದೇಕೆ ಇಷ್ಟು ದಿನ ಈ ಹೊರಲಾರದ ಹೊರೆಯನ್ನು ಹೊತ್ತು ಅಲೆದೆನೋ ತಿಳಿದಿಲ್ಲ. ಸ್ಪಷ್ಟ ಉತ್ತರವಿಲ್ಲ.  ಇಂದು ಎಲ್ಲ ಭಾರವನ್ನು ಕೆಳಗಿಳಿಸಲು ನಿರ್ಧರಿಸಿದ್ದೇನೆ. ಈ ಕಷ್ಟ ಇನ್ನು ನನಗೆ ಬೇಡ.

ಹೊರಲು ಒಲ್ಲೆ ಎನ್ನಲಾರೆ ಈ ಹೊರೆ

ಹೊರಲು ಒಲ್ಲೆ ಎನ್ನಲಾರೆ ಈ ಹೊರೆ!

ಕ್ಷಮಿಸಿ! ನಿಮ್ಮನ್ನು ಗೊಂದಲಕೆ ದೂಡುವ ಉದ್ದೇಶದಿಂದ ಮೇಲಿನ ಪೀಠಿಕೆ ಬರೆದದ್ದಲ್ಲ. ನನ್ನ ಸ್ಥಿತಿಯನ್ನು ಹೇಗೆ ಹೇಳಿಕೊಳ್ಳಬೇಕೆಂದು ತಿಳಿಯದೆ ಈ ಉಪಮಾ, ಉಪಮೇಯಗಳನ್ನು ಬಳಸಬೇಕಾಗಿ ಬಂತು. 

ಖಂಡಿತಾ ಬರವಣಿಗೆ ನನಗೆ ಅತೀವ ಆನಂದ ಕೊಡುವ ಕೆಲಸ. ಅದೇ ಕಾರಣಕ್ಕೆ ಪತ್ರಕೋದ್ಯಮದಿಂದ ದೂರವಾದ ಜೀವ ಅಕ್ಷರ ಲೋಕದಿಂದ ದೂರವಾಗಲು ಸಿದ್ಧವಿರಲಿಲ್ಲ. ಕಳೆದೈದು ವರ್ಷದಿಂದ ಮಾಧ್ಯಮದ ಇನ್ನೊಂದು ಭಾಗವಾದ ಮನರಂಜನೆ ವಿಬಾಗದಲ್ಲಿದ್ದರು, ನನ್ನಲ್ಲಿರುವ ಒಬ್ಬ ಪತ್ರಕರ್ತ ಇನ್ನು ಅಸುನೀಗಿಲ್ಲ. ಅವನನ್ನು ಕಡೆಗಾಣಿಸುವ ಹುನ್ನಾರವು ನನ್ನಲ್ಲಿಲ್ಲ. ದಯವಿಟ್ಟು ಕ್ಷಮೆಯನ್ನು ಒಪ್ಪಿಸಿಕೊಳ್ಳಿ. ಈ ಬ್ಲಾಗ್ ನಿಂದ ಕೆಲವು ದಿನ ದೂರವಿದ್ದು ನನ್ನಿಂದ ಸಣ್ಣ ಪ್ರಮಾದವಾಗಿದೆ. ಮತ್ತೆ ಅಕ್ಷರ ಮೂಡಿಸುವ ಕಾರ್ಯ ಮುಂದುವರೆಯುತ್ತದೆ. ನಿಮ್ಮ ಪ್ರೀತಿ ಮತ್ತು ಬೆಂಬಲ ಇರಲಿ.

 

ಟ್ಯಾಗ್ ಗಳು:

 
%d bloggers like this: