RSS

Monthly Archives: ಜುಲೈ 2010

ಇವರು ಯಾರು ಬಲ್ಲಿರೇನು….?

ಇಲ್ಲಿ ಕೆಲವು ಮಧುರ ಮತ್ತು ಅಪರೂಪದ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಸೆಲಿಬ್ರಿಟಿಗಳ ಮದುವೆ ಫೋಟೋಗಳು, ಅಕ್ಕ ತಂಗಿಯರ ಫೊಟೋ, ಫ್ಯಾಮಿಲಿಯೊಂದಿಗಿನ ಕ್ಷಣಗಳೂ ಇಲ್ಲಿ ಪ್ರಕಟವಾಗಿವೆ. ಮೇಲಿನ ಟೈಟಲ್ ಕ್ಲಿಕ್ ಮಾಡಿ..ಭಾವಚಿತ್ರಗಳನ್ನು ನೋಡಿ. ಜಸ್ಟ ಎಂಜಾಯ್ ಮಾಡಿ……

ಮಂಗೇಶ್ಕರ್ ಕುಟುಂಬ

ಶಾರುಖಾನ್ ಮತ್ತು ಗೌರಿ
ಅರ್ಬಾಜ್ ಮತ್ತು ಮಲೈಕಾ

ಎಲ್ಲೋ ನೋಡಿದ ಮುಖ

ತಮಿಳು ಸ್ಟಾರ್ ವಿಜಯ್

ನೀವೆ ಗೆಸ್ ಮಾಡಿ?

ರೋಜಾ ಮದುವೆ ಕ್ಷಣ

ರಿಶಿಕಪೂರ್ ಮತ್ತು ನೀತುಕಪೂರ್

ರೇವತಿ ಇವರೇನಾ ನಿನ್ನ ಪತಿ?

ರಾಜೇಶ ಖನ್ನಾ

ಮಾಧುರಿ ದೀಕ್ಷಿತ್ ಪತಿರಾಯನ ಜೊತೆ

ಅಕ್ಷಯ್ ಮತ್ತು ಟ್ವಿಂಕಲ್

ಅಮಿತಾಬ್ ಮತ್ತು ಜಯಾ ಬಚ್ಚನ್

ತೆಲಗು ಸ್ಟಾರ್ ಚಿರಂಜೀವಿ

ಜಾಕಿ ಶಾಫ್ರನ ಸಪ್ತಪದಿ

ಕಪೂರ್ ಕುಟುಂಬ

ಕಪೂರ್ ಸಹೋದರಿಯರು

ಸಾಯಿಫ್ ನ ಮೊದಲ ಮದುವೆ

ಖುಷಬು ಸಂಸಾರ

 

ಸುನೀಲ್ ಶೆಟ್ಟಿ ಮದುವೆಯಲ್ಲಿ

ಅಬ್ಬಾಸ್ ಹೆಂಡತಿ ಮತ್ತು ಮಕ್ಕಳೊಂದಿಗೆ

Advertisements
 

ಟ್ಯಾಗ್ ಗಳು:

ಈ ಪ್ರೀತಿಯ ಬೆಲೆ ಪ್ರತಿ ಬಾರಿ.. ದುಬಾರಿ…..

ಅವಳು ಪದೇ, ಪದೇ ತನ್ನ ಮೋಬೈಲ್ನಿಂದ ಕಾಲ್ ಮಾಡುತ್ತಿದ್ದಳು. ಬೆಳಗ್ಗೆ ನಾನು ಡ್ಯೂಟಿಗೆ ಹೋಗುವಾಗಲು ಆ ಹುಡುಗಿ ಹಾಗೇ ಕಾಲ್ ಮೇಲೆ ಕಾಲ್ ಮಾಡುತ್ತಿದ್ದಳು. ಖಂಡಿತ ಕಾಲ್ ಕನೆಕ್ಟ್ ಆಗುತ್ತಿರಲಿಲ್ಲ ಎಂದು ಅವಳ ಹತಾಶ ಮುಖವನ್ನು ನೋಡಿದ ಯಾರಿಗಾದರು ಅನಿಸುತ್ತಿತ್ತು. ಆದರೆ ಅವಳು ಯಾಕೆ ಹಾಗೆ ಎಡಬಿಡದೆ ಕಾಲ್ ಮಾಡುತ್ತಿದ್ದಾಳೆ ಎಂದು ಹೇಳುವುದು ಕಷ್ಟವಾಗಿತ್ತು.

ಅವಳು ತುಂಬಾ ಲೈವಲೀ ಹುಡುಗಿ. ನಾನು ದಿನಾಲೂ ಆಫೀಸ್ ಗೆ 30ಕಿಮೀ ಪ್ರಯಾಣಿಸುತ್ತಿದ್ದೆ. ನಮ್ಮ ಕಂಪನಿ ಬಸ್ ಆಗಿದ್ದರಿಂದ ದೂರ ಅಷ್ಟೇನು ಅನಿಸುತ್ತಿರಲಿಲ್ಲ. ನಾನು ಯಾವಾಗಲು ಅಷ್ಟೇ. ಬಸ್ ಏರುವುದು ಕೊನೆಯ ಕ್ಷಣಗಳಲ್ಲಿಯೆ. ಯಾವಾಗಲೋ ಒಮ್ಮೊಮ್ಮೆ ಅಪರೂಪಕ್ಕೆ ಬೇಗ ಹೋದಾಗ ಅವಳನ್ನು ಡ್ರಾಪ್ ಮಾಡಲು ಒಂದು ಹುಡುಗ ಬರ್ತಾ ಇದ್ದ. ಅಷ್ಟನ್ನು ಮಾತ್ರ ಗಮನಿಸಿದ್ದೆ. ಅವಳು ನನ್ನಲ್ಲಿ ಅಷ್ಟೇನು ಕುತೂಹಲ ಕೆರಳಿಸಿರಲಿಲ್ಲ. ಆದರೆ ಇವತ್ತು ಯಾಕೋ ಅವಳ ಕಡೆಯಿಂದ ಕಣ್ಣನ್ನು ಕಿತ್ತಲು ಆಗುತ್ತಿಲ್ಲ. ಅವಳ ತಲ್ಲಣ, ತಹ ತಹ ಯಾಕೋ ನನ್ನಲ್ಲಿ ಅವಳ ಬಗ್ಗೆ ಮರುಗುವಂತೆ ಮಾಡುತ್ತಿತ್ತು. ಅವಳು ಯಾರಿಗೆ ಹಾಗೆ ಬೆಳಗ್ಗೆಯಿಂದ ಒಂದೇ ಸಮನೆ ಫೋನ್ ಮಾಡಲು ಪ್ರಯತ್ನಿಸುತ್ತಿರಬಹುದು. ಅಂತಹ ಆತಂಕ ಪಡುವಂತಹದ್ದು ಏನಾಗಿರಬಹುದು ಎಂಬ ಕುತೂಹಲ ನನ್ನಲ್ಲಿ ಮಡುಗಟ್ಟಿತ್ತು. ಆಗಲೇ ಇಷ್ಟೇಲ್ಲಾ ಯೋಚನೆಗಳ ಮಧ್ಯ ಬಸ್ ಸ್ಟಾಪ್ ಬಂತು. ಅವಳ ಕಣ್ಣು ಸುತ್ತಲು ಯಾರನ್ನೊ ಗಮನಿಸುತ್ತಿದ್ದವು. ಆದರೆ ಅವಳ ಮುಖಭಾವವೆ ಹೇಳುತ್ತಿತ್ತು ಅವಳು ಹುಡುಕುತ್ತಿದ್ದ ವ್ಯಕ್ತಿ ಅಲ್ಲಿರಲಿಲ್ಲ ಎಂದು. ಪಾಪ! ನಿರಾಶಾ ಭಾವದಿಂದ ಅವಳು ಭಾರವಾದ ಹೆಜ್ಜೆ ಇಡುತ್ತಾ ಹೊರಟು ಹೋದಳು. ಯಾವುದೋ ಕಾಲ್ ಅಟೆಂಡ್ ಮಾಡಿದ ನನಗೆ ಆ ವಿಷಯ ಮರತೆ ಹೋಯಿತು.

ಮತ್ತೆ ಎಂದಿನಂತೆ ಹೊಸ ಮುಂಜಾವು ತೆರೆದುಕೊಂಡಿತು. ಮತ್ತೆ ಒಲ್ಲದ ಮನಸ್ಸಿನಿಂದ ಆಫೀಸ್ಗೆ ಹೋಗಬೇಕಲ್ಲ ಎಂದು ಗಡಿಬಿಡಿಯಲ್ಲಿ ರೆಡಿಯಾದೆ. ಮತ್ತೆ ಗಡಿಯಾರದ ಮುಳ್ಳು ನನ್ನ ಗಡಿ ದಾಟುತ್ತಿತ್ತು. ಅವಸರದ ಹೆಜ್ಜೆ ಇಡುತ್ತಾ ಬಸ್ ಸ್ಟಾಪ್ ತಲುಪಿದೆ. ಅಲ್ಲಿ ಅವಳಿದ್ದಳು. ಮತ್ತೆ ಎಂದಿನ ಉತ್ಸಾಹ, ಲವಲವಿಕೆ ಕಣ್ಣಿಗೆ ಕುಕ್ಕುತ್ತಿತ್ತು. ಕಾರಣ ಅವಳ ಪಕ್ಕದಲ್ಲಿ ಆ ಹುಡುಗನಿದ್ದ. ಅಗ ತಾನೆ ರಭಸದಿ ಬಂದು ಬೈಕ್ ನಿಲ್ಲಿಸಿದ್ದ. ಅವಳು ಹುಸಿ ಕೋಪದಿ ಅವನನ್ನು ತರಾಟೆಗೆ ತೆಗೆದು ಕೊಂಡಿದ್ದಳು. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳ್ತಾ ಇದ್ದಳು. ನನಗೆ ಉತ್ತರ ಸಿಕ್ಕಾಗಿತ್ತು, ಅವಳು ಯಾರ ಪ್ರತಿಕ್ರಿಯೆಗಾಗಿ ತಹತಹಿಸುತ್ತಿದ್ದಳು ಎಂದು. ಅವನು ಓತಪ್ರೋತವಾಗಿ ಸ್ಸಾರಿ.. ಹೇಳುತ್ತಲೆ ಇದ್ದ. ಅವಳ ಅಕ್ಕರೆಯ ಬೈಗುಳಗಳಿಗೆ ಅವನು ಸೋತು ಕೊನೆಗೆ ಹೇಳಿದ್ದು ಕಾರಣ ಇಷ್ಟೇ. ಸ್ಸಾರಿ ಕಣೇ.. ನನಗೆ ಏನು ಆಗಿರಲಿಲ್ಲ. Infact ನಿನ್ನೆಯಲ್ಲಾ ನಾನು ರೂಮಿನಿಂದ ಆಚೆಗೆನೆ ಬಂದಿಲ್ಲ. ಏನಾಯ್ತು ಅಂದರೆ  ನನ್ನ favourite ಟೀಮ್ ಜರ್ಮನಿ ನಿನ್ನೆ ಸೆಮಿಸ್ ನಲ್ಲಿ ಸೋತರು ಕಣೆ. ನಾನು ಜರ್ಮನಿನೆ ಕಪ್ ಗೆಲ್ಲೋದು ಅಂತ ಬೆಟ್ಟಿ ಕಟ್ಟಿದ್ದೆ. I lost 5000 bugs ಪುಟ್ಟಾ ಎಂದ. ಅವಳು ಪಟ್ಟನೆ ‘ಇಡಿಯಟ್ ನಿನಗೆ ಹಾಗೆ ಆಗಬೇಕು, Be ready to spend 1000 bugs for me in the evening. I want to go shopping.. ಇದು ನಿನಗೆ ಪೆನಾಲ್ಟಿ ಎಂದು ಹೇಳುತ್ತಿರವಾಗಲೆ ಬಸ್ ಸ್ಟಾರ್ಟ ಆಗಿತ್ತು. ಅವಳು ಸರ್ರನೆ ಓಡಿ ಬಂದು ಬಸ್ ಏರಿದ್ದಳು. ಅವಳ ಬಾಯ್ ಫ್ರೆಂಡ್ ಮ್ಯಾಚ್ ಸೋತ ನಂತರ ಜರ್ಮನಿ ಪ್ಲೇಯರ್ ಬ್ಯಾಸ್ಟಿನ್ ನಷ್ಟೆ ಕಕ್ಕಾಬಿಕ್ಕಿಯಾಗಿ ನೋಡ್ತಾ ಇದ್ದ. ಆದರೆ ಇವತ್ತು ನನ್ನ ಕಣ್ಣು ಅವಳನ್ನ ಹಿಂಬಾಲಿಸಲಿಲ್ಲ….

 

ಟ್ಯಾಗ್ ಗಳು:

ಹೀಗೊಂದು ನನ್ನ ತುಂಟ ಪ್ರೇಮ ಪಯಣ….

ಅವಳು ಖಂಡಿತ ಪಕ್ಕದಲ್ಲಿಯೆ ಕುಳಿತು ಕೊಂಡಿದ್ದಳು. ಇಲ್ಲಿಲ್ಲಾ ಅವಳು ನನ್ನೊಳಗೆ ಅಂದರೆ ಮನದ ಮೂಲೆಯಲ್ಲಾಗಲೆ ಜಾಗ ಮಾಡಿಕೊಂಡಿದ್ದಳು. ಆದರೆ ಪಕ್ಕದಲ್ಲಿ ಕುಳಿತಿದ್ದು ನಿಜಾ. ಹೆಚ್ಚು ಕಿಟಕಿಯಾಚಿಗಿನ ದೃಶ್ಯಗಳನ್ನೆ ನೋಡುತ್ತಿದ್ದಳು. ನನಗೋ ನೋಡಲು ಇನ್ನೇನಿದೆ. ಸರ್ವಸ್ವವು ಮಗ್ಗುಲಲ್ಲೆ ಕುಳಿತಿರುವಾಗ ಇನ್ನೆಲ್ಲಿ ಚಿತ್ತ ಹರಿಯಲು ಸಾಧ್ಯ. ಅವಳ ತುಂಟಿಯಚಿನಲ್ಲಿ ಇದ್ದದ್ದು ತುಂಟ ನಗೆ. ಛೇ! ಅದು ನನಗೆ ಹಾಗೆ ಕಂಡಿದ್ದಿರಬೇಕು. ಅವಳದು ಶುದ್ಧ, ನಿಷ್ಕಲ್ಮಶ ನಗು. ನಿಲ್ಲಿ.. ನಿಲ್ಲಿ… ಯಾಕೋ ಈ ಪದಗಳು ಸರಿ ಅನ್ನಿಸ್ತಿಲ್ಲ. ಅವಳು ನಗ್ತಾ ಇದ್ದಳು. ಅದು ಸತ್ಯ. ಆಗಾಗ ಸ್ವಚ್ಛಂದವಾಗಿ ಹಾರಲು ಬಿಟ್ಟಿದ್ದ ಅವಳ ಕೂದಲು ನನ್ನ ಮುಖಕ್ಕೆ ಬಂದು ಮುತ್ತಿಕ್ಕುತ್ತಿದ್ದವು. ಅವಳ ಜೊತೆ ನನ್ನದು ತೀರಾ ಅನ್ನುವಷ್ಟು ಸಲಿಗೆ. ಅದಕ್ಕೆ ಅವಳ ನಡುವಿಗೆ ನನ್ನ ಕೈ ಬೆರಳುಗಳು ದೈರ್ಯವಾಗಿ ಕಚಗುಳಿ ಇಡುತ್ತಿದ್ದವು. ಆದರೆ ಅವಳ ಪ್ರತಿಕ್ರಿಯೆ ಹಾಗೆಯೆ ಇತ್ತು. ಅಂದರೆ ತುಟಿಯ ಅಂಚಲಿ ತುಂಟ ಕಿರುನಗೆ.  ಇರಬಹುದೇನೋ.

ಅದ್ಯಾಕೋ ನಮ್ಮಿಬ್ಬರ ತುಂಟಾಟಕ್ಕೆ. ಇಬ್ಬರು ಅಲ್ಲ ನನ್ನೊಬ್ಬನ ತುಂಟಾಟಕ್ಕೆ ಅವಳು ಎಂದೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಿಲ್ಲ. Infact ಅದು ಅವಳಿಗು ಇಷ್ಟವಾಗುತ್ತಿತ್ತೇನೋ? ಗೊತ್ತಿಲ್ಲ. ನಾವು ಆಟೋದಲ್ಲಿ ಕುಳಿತೆವೆಂದರೆ ನನ್ನ ಕೈ ಎಲ್ಲೆಲ್ಲೊ ಜಾರುತ್ತಿತ್ತು. ಅದಕ್ಕೆ ಎಲ್ಲೆಯ ಪರಿಮಿತಿ ಇರಲಿಲ್ಲ. ಅದೊಂದು ಯಾರ ಗಮನಕ್ಕು ಬರದೆ ಸುಪ್ತವಾಗಿ ನಡೆಯುತ್ತಿತ್ತು. ಅವಳೋ ಒಳಗೊಳಗೆ ನನ್ನ ಕಚಗುಳಿಗೆ ನಗುತ್ತಿದ್ದಳು. ಅಂತಹ ನನ್ನ ಹುಡುಗಿ ಮತ್ತು ನಾನು ದೂರದೂರಿಗೆ ಹೊರಟಿದ್ದೇವು.

ಅವಳ ಪಕ್ಕ ನಾನಿದ್ದೆ. ಅಷ್ಟು ಸಾಕಿತ್ತು  ಸ್ವರ್ಗಕ್ಕೆ ಗೇಣು ಅಳಿಯಲು. ಅದು ಮಟ ಮಟ ಮಧ್ಯಾಹ್ನ. ಹೊರಗೇನೋ ಬಿಸಿಲಿನ ಝಳ. ಆದರೆ ನನ್ನಲ್ಲಿ ಏರಿದ ಕಾವಿಗೆ ಖಂಡಿತಾ ಆ ಬಿಸಿಲು ಕಾರಣವಾಗಿರಲಕ್ಕಿಲ್ಲ. ಏಕೆಂದರೆ ನಾವು ಹೊರಟಿದ್ದು VOLVO ಬಸ್ಸಿನಲ್ಲಿ. ಸುತ್ತಲು ಮೊದಲೆ ಕಣ್ಣಾಡಿಸಿದ್ದೆ. ಅಲ್ಲೊಬ್ಬರು,ಇಲ್ಲೊಬ್ಬರು ಎಂಬಂತೆ ಕುಳಿತುಕೊಂಡಿದ್ದರು. ಏರಿ ನಿಂತ ಸೀಟಿನಲ್ಲಿ ಅವುಚಿ ಕುಳಿತ ನಾವು ಯಾರ ಕಣ್ಣಿಗು ಬಿದ್ದಿರಲಿಕ್ಕಿಲ್ಲ. ಅಥವಾ ನಾನು ಹಾಗೆ ಅಂದು ಕೊಂಡಿದ್ದಿರಬೇಕು. ಆಗಲೆ ಹೇಳಿದೆನಲ್ಲಾ ಹೊರಗೆ ಬಿಸಿಲು ಒಳಗೆ AC. ಹೀಗಾಗಿ ಎಲ್ಲರು ನಿದ್ದೆ ಹೋಗಿದ್ದರು. ಅದಕ್ಕೆ ಅಲ್ಲಿ ನಾವಿರಲಿಲ್ಲ. ಅಲ್ಲಲ್ಲಾ… ನಮ್ಮ ಮನಸ್ಸುಗಳಿರಲಿಲ್ಲಾ ಎಂಬುದು ಸೂಕ್ತ ಪದ. ಅವಳ ತುಂಬಾ ಸುಂದರಿ. ಹಾಗಂತ ನಾನಂದು ಕೊಂಡಿದ್ದೇನಾ? ಸ್ಪಷ್ಟವಿಲ್ಲ. ತುಸು ಬಣ್ಣವಿತ್ತು ಯಾವುದೋ ಗೊತ್ತಿಲ್ಲ. ಎತ್ತರವಿದ್ದಳು. ಅಷ್ಟು ಸಾಕು ಅನಿಸುತ್ತೆ ಅವಳು ಎತ್ತರವಿದ್ದಳು ಎಂದು ಹೇಳುವುದಕ್ಕೆ. ಗೊತ್ತಿಲ್ಲ. ಅದಕ್ಕು ಸ್ವಲ್ಪ ಎತ್ತರವಿದ್ದರೆ ಮಾತ್ರ ಎತ್ತರ ಎಂದೂ ಹೇಳಬಹುದೆನೋ. ಸಾಧಾರಣ ಎತ್ತರ ಎಂದಿಟ್ಟುಕೊಳ್ಳಿ. ಹಾಗೆ ಸಾಧಾರಣ ಮೈಕಟ್ಟು. ಉಳಿದ ವಿವರಣೆ ವೈಯಕ್ತಿಕ. ಅದರ ಉಸಾಬರಿ ನಿಮಗ್ಯಾಕೆ. ಅವಳು ಶುದ್ಧ ನನ್ನ ಹುಡುಗಿ.

ಇಂತಹ ನನ್ನ ಹುಡುಗಿ ಈಗ ನನ್ನ ಸುಪರ್ದಿಯಲ್ಲಿ. ಛೇ! ಛೇ! ಅವಳು ನನ್ನ ಪ್ರಿತೀಯ ತೊಳ್ತೆಕ್ಕೆಯಲ್ಲಿ. ಅಲ್ಲಲ್ಲಾ.. ಅವಳಿದ್ದದ್ದು ನನ್ನ ಪಕ್ಕದಲ್ಲಿ. ಅಷ್ಟೆ ಅಂದುಕೊಲ್ಳಿ ಸಾಕು. ನನಗೋ ತಡೆಯಲಾಗದ ವಾಂಛೇಗಳು ಚಿಗುರೊಡೆಯುತ್ತಿವೆ. ಅವಳು ನನ್ನದೆಲ್ಲವು ನಿನಗೆ ಅರ್ಪಿತ ಎಂಬ ಭಾವದಲ್ಲಿ ಕುಳಿತಿದ್ದಳು. ನಾನು ಯಾವ ಅಂಜಿಕೆಯು ಇಲ್ಲದೆ ಅವಳ ಮೈಮೇಲೆ ಬೆರಳುಗಳಿಂದ ಚಿತ್ತಾರ ಬಿಡಿಸುತ್ತಿದ್ದೆ. ಅವಳು ಪುಳಕಗೊಳ್ಳುತ್ತದ್ದಳು. ಅದು ನನಗೆ ಇನ್ನೊಂದು ಹಂತ ಮೇಲೆರುವುದಕ್ಕೆ ಅಣಿ ಮಾಡಿದಂತಿರತಿತ್ತು. ಸುತ್ತ ನೋಡಿದೆ ಎಲ್ಲರು ಕಣ್ಣು ಮುಚ್ಚಿದ್ದರು. ನಾನು ಮುಚ್ಚಿದೆ. ಒಂದು ಕ್ಷಣ ಅವಳ ಕಡೆ ತಿರುಗಿದೆ. ಚಿವುಟುಗಣ್ಣಿನಿಂದ ನೋಡಿದಾಗ ಮತ್ತೆ ಅದೇ ತುಂಟಿಯ ಅಂಚಲಿ ತುಂಟ ಕಿರುನಗೆ. ಹಿಡಿದು ಮುತ್ತಿಕ್ಕಿದೆ …ಇಲ್ಲಾ..ಇಲ್ಲಾ.. ಮುತ್ತಿಕ್ಕ ಬೇಕೆಂದೆ., ಬಸ್ ಬರ್ರರ್ರ ಎಂದು ನಿಂತಿತು. ಎಲ್ಲರು ಹೌಹಾರಿ ನಿಂತು ಕೊಂಡರು. ನಾನು ಎದ್ದು ಹೋಗಿ ಕೆಳಗಿಳಿದು ನೋಡಿದೆ. ಒಂದು ಸುಂದರ ಬಿಳಿ “ಮೊಲ” ನಮ್ಮ VOLVO ಬಸ್ಸಿನ ಮುಂದಿನ ಗಾಲಿಗೆ ಬಲಿಯಾಗಿತ್ತು. ನಾನು ನೀರವ ಮೌನದೊಂದಿಗೆ ಬಂದು ನನ್ನ ಏಕಾಂಗಿ ಸೀಟಿಗೆ ಒರಗಿ ಕುಳಿತೆ. ಮತ್ತದೆ ಬೇಸರ ನನ್ನಲ್ಲಿ. ಬಸ್ಸು ಮತ್ತೆ ಚಲಿಸ ತೊಡಗಿತು. ನಾನು “ಮೊಲ”ದ ನೆನಪನ್ನು ಅಲ್ಲಿಯೆ ಬಿಟ್ಟು ಸುಮ್ಮನೆ ಕುಳಿತಿದ್ದೆ. ನಿದ್ರೆಗೆ ಜಾರಿದ್ದು ಯಾವಾಗ ಗೊತ್ತಿಲ್ಲಾ…..

 

ಟ್ಯಾಗ್ ಗಳು:

ಅಣ್ಣಾ! ನೀನು ಬಿತ್ತಿದ ಆದರ್ಶದ ಬೀಜವೆ ಈಗ ಮೊಳಕೆಯೊಡೆಯುತ್ತಿರುವುದು..

ಅಪ್ಪಾ ಎಂಬುವವನು ಹಿರೋ! ಜೆಮ್ಸ ಬಾಂಡ್! ಏನೋ ಅಗಾಧತೆಯನ್ನು ಬಿಚ್ಚಿಡುವ ಕೌತುಕ ಹಾಗಂತ ನಾನ್ಯಾವತ್ತು ಅಂದು ಕೊಮಡಿಲ್ಲ. ಅದೆಲ್ಲ ಶುದ್ಧ ಸುಳ್ಳು. ನನ್ನ ಪಾಲಿಗೆ ಅಪ್ಪಾ ಇದೆಲ್ಲಾ ಅಲ್ಲವೆ ಅಲ್ಲಾ. ಅವನು ಶುದ್ಧ ಸಾತ್ವಿಕ ಸಿಟ್ಟಿನ, ಆದರ್ಶದ ಪ್ರತಿಬಿಂಬ ಎಂಬುದು ನನ್ನ ಪಾಲಿನ ಸತ್ಯ!

ನಾನಾವಾಗ ಚಿಕ್ಕವನಿದ್ದೆ. ಅಪ್ಪಾ ಹಳ್ಳಿಯ ಶಿಕ್ಷಕ. ಶಿಕ್ಷಕ ಎಂದರೆ ಕೋಪದ ಪ್ರತಿರೂಪವೋ ಅಥವಾ ಕೋಪ ಇರುವುದು ಶಿಕ್ಷಕರಲ್ಲಿ ಸಾಮಾನ್ಯವೋ ಗೊತ್ತಿಲ್ಲ. ಆದರೆ ನನ್ನ ಅಣ್ಣ (ಅಪ್ಪನನ್ನು ನಾನು ಕರೆಯುವುದೆ ಹಾಗೆ)ನ ಮೂಗಿನ ಮೇಲೆ ಸಿಟ್ಟು ಯಾವಾಗಲು ತಾಂಡವ ಆಡ್ತಾ ಇರುತ್ತದೆ. ಆಗಲೆ ಹೇಳಿದೆನಲ್ಲ ನಾನು ಸಣ್ಣವನಿದ್ದಾಗ ಸೈಕಲ್ ತುಳಿಯುವ ಹುಚ್ಚು ರಗಡಿತ್ತು. ಹುಚ್ಚಿಗೆ ಬಿದ್ದು ಸೈಕಲ್ ಹೊಡೆಯುತ್ತಿದ್ದೆ. ಆದರೆ ಅದಕ್ಕಾಗಿ ಅಣ್ಣನಿಂದ ಪಡೆಯಬೇಕಾದದ್ದು ನಾಲ್ಕಾಣೆ (25ಪೈಸೆ) ಅಥವಾ ಏಂಟಾಣೆ(50ಪೈಸೆ). ಅದು ಕೇಳಲು ಧೈರ್ಯವಿಲ್ಲದೆ ವೈನಿ( ಅಮ್ಮ) ಮುಂದೆ ಅರ್ಜ ಇಡುತ್ತಿದ್ದೆ. ದೂರದಲ್ಲೆಲ್ಲೋ ನಾನು ಅಣ್ಣಾ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂದು ಕುತೂಹಲದಿಂದ ನೋಡುತ್ತಾ ನಿಲ್ಲುತ್ತಿದ್ದೆ. ಒಂದು ಸಾರಿ ನನ್ನ ಕಡೆ ತಿರುಗಿ ನೋಡಿದರೆ ಮುಗಿದೆ ಹೋಯಿತು ಜೀವವೆ ಬಾಯಿಗೆ ಬಂದಂತೆ ಆಗುತ್ತಿತ್ತು. ಅಪ್ಪ ಎಂದರೆ ಭೀತಿ. ಅದೇ ಅಮ್ಮ ಶುದ್ಧ ಕರುಣಾಮಯಿ. ಅವಳ ಕೊನೆಯಿರದ ಪ್ರೀತಿ ಮತ್ತು ಮಕ್ಕಳೆಡೆಗಿನ ಪೊಸೆಸಿವ್ ನೆಸ್ ಬಗ್ಗೆ ಮತ್ತೊಮ್ಮೆ ಬರೆದೇನು.

ನನ್ನಣ್ಣನ ಭಾವಚಿತ್ರ

ನನ್ನಣ್ಣ ಆ ದಿನಗಳಲ್ಲಿ

ಆದರೆ ಅದೇನೆ ಇರಲಿ ಅಣ್ಣಾ ನನಗೆ ಕಲಿಸಿದ್ದು ಒಂದು ಆದರ್ಶದ ಪಾಠವನ್ನು. ಆತ ತನ್ನ ಶಿಕ್ಷಕ ವೃತ್ತಿಯ ಕೊನೆಯವರೆಗು ಯಾವ ರಾಜಕಾರಣಿಗಳ ಮುಖಾಂತರ ಲಾಬಿ ಮಾಡಿಸಲಿಲ್ಲ. ವೃತ್ತಿಯಲ್ಲಿ ಕಪಟತನ, ಕಳ್ಳ ಬೀಳುವುದು ಸುಖಾ ಸುಮ್ಮನೆ ರಜೆ ಹಾಕಿ ಕಾಲ ಹರಣ ಮಾಡುವುದು. ಸಾಧ್ಯವೇ ಇಲ್ಲಾ! ಇದ್ಯಾವುದನ್ನು ರೂಢಿಸಿಕೊಳ್ಳದ ಅಣ್ಣಾ ಬರೀ ಕುಗ್ರಾಮಗಳಲ್ಲಿಯೆ ಕೆಲಸ ಮಾಡಿದ. ಶಾಲೆಯ ಆವರಣಗಳಲ್ಲಿ  ಸಸಿಗಳನ್ನು ನೆಟ್ಟಾ. ಅವುಗಳನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿಸಿ ಬೆಳೆಸಿದ. ಎಲ್ಲಾ ವರ್ಗದ ಜನರ ಜೊತೆ ಮುಕ್ತವಾಗಿ ಬೆರೆಯುತ್ತಾ ಅವರಲ್ಲಿ ಒಬ್ಬನಾಗುತ್ತಿದ್ದ. ಆತ ನಿವೃತ್ತಿಯ ಕೊನೆಯ ದಿನಗಳಲ್ಲಿ ಮಾತ್ರ ನನಗೆ ಗೊತ್ತಿದ್ದಂತೆ ಕಿನ್ನಾಳ ಎಂಬ ಹೋಬಳಿ ಮಟ್ಟದ ಊರಿನಲ್ಲಿ ಕಳೆದಿದ್ದು. ಇಂತಹ ಅಣ್ಣಾ ನನಗೆ ಕಲಿಸಿದ್ದು ಪ್ರಾಮಾಣಿಕತೆ ಮತ್ತು ಆದರ್ಶವನ್ನು. ಮನಸ್ಸು ಕಪಟಕ್ಕೆ ಬೀಳುತ್ತೆ ಅಂತ ಅನಿಸಿದರೆ ಪಟ್ಟನೆ ಒಂದು ಕ್ಷಣ ಅಣ್ಣನ ಮುಖ ನೆನಪಿಗೆ ಬರುತ್ತೆ. ಅಷ್ಟೆ! ಎಲ್ಲವು ತನ್ನಿಂದ ತಾನೆ ಜಾಗೃತವಾಗುತ್ತೆ. ಅದಕ್ಕೆ ಅಣ್ಣಾ ನನಗಾಗಿ ಬಹು ದೊಡ್ಡ ಆಸ್ತಿಯನ್ನೆ ಗಳಿಸಿ ಕೊಟ್ಟಿದ್ದಾನೆ ಎಂದು ನನಗೆ  ಹೆಮ್ಮೆಯಿದೆ.

ಇಷ್ಟೆಲ್ಲಾ ನೆನಪಾಗಲು ಕಾರಣ ಇತ್ತೀಚಿಗೆ  ಅಂದರೆ ಜುಲೈ 01ರಂದು ಅಣ್ಣನ ಹುಟ್ಟು ಹಬ್ಬವಿತ್ತು. ಯಾಕೋ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲಾಗಲಿಲ್ಲ. ಅದಕ್ಕೆ ಈ ಬರಹದ ಮೂಲಕ ಒಂದು ಸಣ್ಣ ಕೃತಜ್ಞತೆ ಮತ್ತು ಶುಭಾಶಯ ಹೇಳುತ್ತಿದ್ದೇನೆ. “ಅಣ್ಣಾ! ನೀನು ಅಂದು ಮಾತ್ರವಲ್ಲ ಇಂದಿಗು ನನಗೆ ಆದರ್ಶದ ಗುರುವೆ. ನನಗೆ ನಿನ್ನ ಬಗ್ಗೆ ಹೆಮ್ಮೆ ಇದೆ. ಈ ಉಡುಗೋರೆಯನ್ನು ಜೋಪಾನವಾಗಿ ಕಾಯ್ದು ಕೊಳ್ಳುತ್ತೇನೆ. ಇದಕ್ಕಿಂತ ಹೆಚ್ಚಿನದೇನು ಬೇಕು!”

 

ಟ್ಯಾಗ್ ಗಳು:

“ಭಾರತ್ ಬಂದ್” ನಡೆಸುವ ಭಂಡರೆ, ನಿಮಗೊಂದು ಧಿಕ್ಕಾರ!!!

ಗಿಜಿಗುಡುವ ರಸ್ತೆಗಳು ಬಿಕೋ ಅನ್ನುತ್ತಿವೆ. ಕಿವಿಗಡಚಿಕ್ಕುವ ಹಾರ್ನ ಶಬ್ದವಿಲ್ಲ. ಎಲ್ಲಿ ನೋಡಿದರು ಕಪ್ಪು ಬೂಟುಧಾರಿಗಳು. ಸುತ್ತಲ್ಲೆಲ್ಲಾ ಸ್ಮಶಾನ ಮೌನ. ಪಡ್ಡೆಗಳಿಗೆ ಬಸ್ ಸ್ಟ್ಯಾಂಡ್, ಮೇನ್ ರೋಡ್ ಗಳು ಕ್ರಿಕೆಟ್ ಗ್ರೌಂಡ್ ಗಳಾಗುತ್ತವೆ. ಜನ ಅದೇನೋ ಭಿತಿಯಿಂದ ಮನೆಯಿಂದ ಹೊರ ಬೀಳುತ್ತಾರೆ. ಕೆಲವರಿಗೆ ರಜೆಯ ಮಜಾ ಮತ್ತೂ ಕೆಲವರಿಗೆ ಅನುಭವಿಸಲಾಗದ ಸಜಾ. ಒಂದು ಒಪ್ಪತ್ತಿನ ಊಟ ಕಟ್! This is BHARAT BANDH!!!

ಭಾರತ್ ಬಂದ್! ಈ ಘೋಷ ಕೇಳುತ್ತಿದ್ದಂತೆ ನನಗೆ ರಾಮಿರೆಡ್ಡಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದ (ಹಿರೋ ಯಾರಿದ್ದರು ಎಂದು ನೆನಪಿಲ್ಲ) ಸಿನಿಮಾ ನೆನಪಿಗೆ ಬರುತ್ತದೆ. ಅದರಲ್ಲಿ ಒಂದು ಗೂಳಿಯ ಮೇಲೆ ಭಾರತ್ ಬಂದ್ ಎಂದು ಬರೆದು ಮಾರ್ಕೆಟ್ ನಲ್ಲಿ ಬಿಟ್ಟಿರುತ್ತಾರೆ. ಅದರಂತೆ ಆಗಿದೆ ಈಗಿನ ವ್ಯವಸ್ಥೆ. ಇಲ್ಲಿ ಗೂಳಿಗಳು ಯಾರು ಎಂದು ನಿರ್ಧರಿಸುವುದು  ನಿಮಗೆ ಬಿಟ್ಟದ್ದು…..

ಆದರೆ ಚರ್ಚೆ ಅದಲ್ಲ ಒಂದು ದಿನ ಬಂದ್ ಮಾಡುವುದರಿಂದ ಉಂಟಾಗಬಹುದಾದ ಹಾನಿಯ ಸಣ್ಣ ಅಂದಾಜಾದರು ನಮ್ಮ ರಾಜಕೀಯ ಪಕ್ಷಗಳಿಗೆ, ಬಂದ್ ಗೆ ಬೆಂಬಲ ಸೂಚಿಸುವ ಸಂಘಟನೆಗಳಿಗೆ ಇದೆಯಾ. ಇದ್ಯಾವ ಹಿತಾಸಕ್ತಿ ಮಾರಾಯ್ರೆ! ಕೇವಲ ದೊಡ್ಡ ಮಟ್ಟದಲ್ಲಿ ವಿಚಾರ ಮಾಡುವುದು ಬೇಡ ದಿನಗೂಲಿ ಮಾಡಿ ಆ ದಿನ ಬಂದ ಹಣದಿಂದಲೆ ಅನ್ನ ಬೇಯಿಸಿಕೊಳ್ಳುವ ಜನ ಸಾಮಾನ್ಯರ ಬಗ್ಗೆ ಯೋಚನೆ ಮಾಡಿದ್ದೀರಾ. ಯಾರದೋ ಮನೆಗೆ ಕಲ್ಲು, ಇಟ್ಟಂಗಿ, ಸಿಮೆಂಟ್ ಹೊತ್ತು,  ಯಾವುದೋ ಕಾಮಗಾರಿಗಾಗಿ ತೆಗ್ಗು ಕಡೆದು, ರಸ್ತೆ ಬದಿಯಲ್ಲಿ ಸಣ್ಣದಾಗಿ ತರಕಾರಿ ಮಾರಿ, ಗಿಜಿಗುಟ್ಟುವ ಬಸ್ ಸ್ಟಾಪ್, ಮಾರ್ಕೆಟ್ ಗಳಲ್ಲಿ ಹಣ್ಣು ಕರಿದ ತಿನುಸು ಮತ್ತಿನ್ನೇನೋ ಮಾರಿ ನಾಲ್ಕು ಪುಡಿಗಾಸು ಸಂಪಾದಿಸಿಕೊಳ್ಳುವ ಜನಗಳಿಗೆ ನೀವು ಒಪ್ಪತ್ತಿನ ಊಟ ಹಾಕುತ್ತೀರಾ ಮಹಾಶಯರೆ? ಇದು ಕೇವಲ ಬಂದ್ ನಿಂದಾ ಉಂಟಾಗುವ ಪರಿಣಾಮದ ಒಂದು ಮುಖವಾದರೆ ಇದರ ಇನ್ನೊಂದು ಬರೆ ಇಡೀ ಜನಸಮೂಹದ ಮೇಲೆ ಆಗುವಂತಹದ್ದು.

ಇದಕ್ಕ್ಯಾರು ಹೋಣೆ ?

ಒಂದು ಅಂದಾಜಿನ ಪ್ರಕಾರ ನಿನ್ನೆಯ ಬಂದ್ ನಿಂದಾಗಿ ಆದ ಒಟ್ಟು ನಷ್ಟ 13 ಸಾವಿರ ಕೋಟಿ. ಈ ನಷ್ಟ ಪರಿಣಾಮ ಎಷ್ಟಾಗಬಹುದು ಎಂದು ಊಹಿಸುವುದು ಕಷ್ಟ. ಹಾಗೆಯೇ ಇದು ನಮ್ಮ ಒಟ್ಟು ಆರ್ಥಿಕ ಉತ್ಪನ್ನದ (ಜಿಡಿಪಿ) ಮೇಲೆ ಇದು ಪರಿಣಾಮ ಬೀರದಿರುವುದೆ? ಈಗ ನೀವು ಮಾಡಿರುವ ಬಂದ್ ಕೇಂದ್ರ ಸರಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿರುವುದರ ವಿರುದ್ಧ ಅಲ್ಲವೆ? ಆದರೆ ಇ ರೀತಿ ಬಂದ್ ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದರಿಂದ ಇದರ ನೇರ ಪರಿಣಾಮ ಮತ್ತೆ ಜನಸಾಮಾನ್ಯನ ಮೇಲೆಯೇ ಅಲ್ಲವೆ ಮಹಾಪ್ರಭುಗಳೆ? ಇದರಿಂದ ಯಾರ್ಯಾರಿಗೆ ಎಷ್ಟೇಷ್ಟು ಲಾಭ ಆಯ್ತೋ ತಿಳಿಯದು. ಆದರೆ ಬಂದ್ ಮಾಡಿದ್ದರಿಂದ ಕೇಂದ್ರ ಸರಕಾರವೇನು ತನ್ನ ನಿಲುವನ್ನು ಬದಲಿಸಿಲ್ಲ. ಹಾಗೆ ಸಾಮಾನ್ಯ ಜನಕ್ಕು ಇದರಿಂದ ಉಪಯೋಗವಾಗಿಲ್ಲ. ಸುಖಾ ಸುಮ್ಮನೆ ಇಂತಹ ಬಂದ್ ಗಳು ಯಾರ ಮೆಚ್ಚುಗೆಗೆ ನೀವೇ ಹೇಳಿ. ಎಷ್ಟೋ ಕಡೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲಾಯಿತು, ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರಿಗೆ ಕಿರುಕುಳ ಮಾಡಲಾಯಿತು, ಸರಕಾರಿ ಬಸ್ ಗಳಿಗೆ ಕಲ್ಲು ಹೊಡೆದದ್ದಾಯಿತು. ಬಂದ್ ಅಂದರೆ ಇದೇನಾ? ನೀವೆ ಉತ್ತರಿಸಿ…

ದಯವಿಟ್ಟು ಬಂದ್ ಗಳು ಅರ್ಥಪೂರ್ಣವಾಗಲಿ. ಪ್ರತಿಭಟನೆಯ ಸ್ವರೂಪ, ಕುರೂಪವಾಗುತ್ತಿದೆ ಎಂಬ ಅರಿವು ನಿಮಗೇಕೆ ಆಗುತ್ತಿಲ್ಲ. ಪ್ರಜೆಗಳ ಕುಂದು ಕೊರತೆ ಚರ್ಚಿಸಲೆ ಅಲ್ಲವೆ ಸಂಸತ್ ನಲ್ಲಿ ಕಲಾಪಗಳು ನಡೆಯುವದು. ಅದನ್ನ ಯಾಕೆ ಹಾದಿ ರಂಪ ಬೀದಿ ರಂಪ ಮಾಡುತ್ತೀರಿ. ತೀರಾ ಅನಾಗರಿಕರ ತರಹ ಬಸ್ ಗೆ, ಕಟ್ಟಡಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆಯಲು ಅವಕಾಶ ಮಾಡಿಕೊಡುವಂತಹ ನಿಮ್ಮ ಬಂದ್ ಗಳಿಗೆ ಧಿಕ್ಕಾರವಿರಲಿ!!!

 

ಟ್ಯಾಗ್ ಗಳು:

ಢೋಂಗಿ ಬುದ್ಧಿ ಜೀವಿಗಳಿಗೆ ಒಂದು ಚಾಟಿ ಏಟು

ಇತ್ತೀಚಿಗೆ ನಮ್ಮ ಸೋ ಕಾಲ್ಡ ಬುದ್ಧಿಜೀವಿಗಳಲ್ಲಿ ಒಬ್ಬರಾದ ಜಿ ಕೆ ಗೋವಿಂದರಾವ್ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳಲ್ಲಿ ಎಂಬ ಅಪ್ರಸ್ತುತ ಹೇಳಿಕೆ ನೀಡಿದ್ದಕ್ಕೆ “ವಿಜಯ ಕರ್ನಾಟಕ”ದ ವಾಚಕರ ವಿಜಯದಲ್ಲಿ ಓದುಗರೊಬ್ಬರು ಬೀಸಿದ ಚಾಟಿ ಏಟು ಹೀಗಿದೆ………….ಇದು ಬೇಕಿತ್ತಾ!!!!

 

ಟ್ಯಾಗ್ ಗಳು:

ಸಿದ್ದು! ಈ ಸಾವು… ಆಘಾತಕಾರಿ!!!

ಅಗಲಿದ ಗೆಳೆಯನಿಗೊಂದು ಶ್ರದ್ಧಾಂಜಲಿ.

ಮಿತ್ರ ಸಿದ್ದು ಅಗಲಿ ತಿಂಗಳುಗಳೆ ಕಳೆದವು. ಬದುಕಿನುದ್ದಕ್ಕು ಸದಾ ಹಸನ್ಮುಖಿಯಾಗಿ, ಗೆಳೆಯರ ಒಡನಾಟದಲ್ಲಿ ಒಂದು ಮಿಂಚಿನ ಸಂಚಾರವಾಗಿದ್ದ ಸಿದ್ದು ಬಾರದ ಲೋಕಕ್ಕೆ ತಿರುಗಿ ಹೊಗಿದ್ದು ನಿಜಕ್ಕು ಭರಿಸಲಾಗದ ದುಃಖ ನಿಡಿದೆ. ನಮ್ಮನ್ನೆಲ್ಲಾ ಅಗಲಿ ಹೋದೆಯಾ ಗೆಳೆಯಾ....ನನ್ನ ಮತ್ತು ಸಿದ್ದು ಪರಿಚಯ ಭಾಗ್ಯನಗರದ ಹೈಸ್ಕೂಲ್ ನಿಂದ ಪ್ರಾರಂಭವಾಗಿದ್ದು. ನಿತ್ಯ ಅವನ ಸೈಕಲ್ ನಲ್ಲಿ ನಾನು ಸ್ಕೂಲ್ ಗೆ ಹೋಗುತ್ತಿದ್ದೆ. ತುಂಬಾ ಆತ್ಮೀಯತೆಯಿಂದ ನನ್ನನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಸಿದ್ದು. ತುಂಬಾ ಬೇಗನೆ ಇಬ್ಬರ ಮಧ್ಯ ಸಲುಗೆ ಬೆಲೆದು ಹೋಗಿತ್ತು. ಅವನು ಅದೆಷ್ಟು ಬೇಗ ಜಗಳಕ್ಕೆ ಮೈ ಮೇಲೆ ಏರಿ ಹೋಗುತ್ತಿದ್ದನೋ, ಅಷ್ಟೇ ಬೇಗ ಗೆಳೆತನದ ತೆಕ್ಕೆಗೆ ಸೆಳೆದುಕೊಳ್ಳುವ ಮಾಂತ್ರಿಕತೆ ಅವನಲ್ಲಿತ್ತು. ಸಿದ್ದು ನನಗೆ ತೀರಾ ಆಪ್ತ ಎಂದೇನು ಅಲ್ಲ. ಆದರೆ ಖಂಡಿತ ನನಗೆ ಪ್ರೀತಿಯ ಗೆಳೆಯನಾಗಿದ್ದಾ. ಅವನ ಸಾವಿನ ಖಾಲಿತನ ನಿರಂತರ…”ಸಿದ್ದಾ ಇಲ್ಲೆ ಹ್ಯಾಂಗ ಬಿಂದಾಸ್ ಆಗಿದ್ದಿ, ಅಲ್ಲಿಯು ನಿನ್ನ ಆತ್ಮ ಫುಲ್ ಖುಷ್ ಆಗಿರಲಿ. ನಿನ್ನ ಜಾತ್ರೆ ಮುಗಿತಲೆ ಮಗನ….”

 

ಟ್ಯಾಗ್ ಗಳು:

 
%d bloggers like this: